More

    ನನಗೆ ಬೇರೆ ಖಾತೆ ಸಿಗುವ ನಿರೀಕ್ಷೆ ಇತ್ತು: ನೂತನ ಗೃಹ ಸಚಿವ ಡಾ.ಜಿ.ಪರಮೇಶ್ವರ್

    ತುಮಕೂರು: ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರದ ಸಚಿವರ ಖಾತೆ ಸಹಿತ ವಿವರ ಇರುವ ಅಧಿಕೃತ ಪಟ್ಟಿ ನಿನ್ನೆ ತಡರಾತ್ರಿ ಪ್ರಕಟಗೊಂಡಿದ್ದು, ನೂತನ ಸಚಿವರು ತಮಗೆ ಸಿಕ್ಕ ಖಾತೆಗಳ ಕುರಿತು ಅನಿಸಿಕೆ ಹಂಚಿಕೊಳ್ಳಲಾರಂಭಿಸಿದ್ದಾರೆ. ನೂತನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ತಮ್ಮ ಖಾತೆ ವಿಚಾರವಾಗಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

    ಗೃಹ ಖಾತೆ ನನಗೆ ಒಪ್ಪಿಗೆ ಇರೋದು ಬೇರೆ ವಿಚಾರ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಬೇಕು. ಪಕ್ಷ ಯಾವ ಜವಾಬ್ದಾರಿ ಕೊಡುತ್ತದೋ ಅದನ್ನು ಮಾಡಬೇಕು ಎಂದ ಅವರು, ನನಗೆ ಬೇರೆ ಖಾತೆ ಸಿಗುವ ನಿರೀಕ್ಷೆ ಇತ್ತು ಎಂಬ ಮಾತನ್ನೂ ಹೇಳಿದರು.

    ಇದನ್ನೂ ಓದಿ: ಈಜಿನ ಮೋಜು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಮಂದಿಯ ಮರಣ..

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎರಡು ಬಾರಿ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ನನ್ನ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ಗೃಹ ಖಾತೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಗೃಹ ಖಾತೆ ಬಹಳ ಮುಖ್ಯವಾದದ್ದು ಎಂದು ಈ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು.

    ಇದನ್ನೂ ಓದಿ: ರಾಜ್ಯಕ್ಕೆ ಮಾನ್ಸೂನ್ ಆಗಮನ ಯಾವಾಗ?; ಇಲ್ಲಿದೆ ಹವಾಮಾನ ಇಲಾಖೆ ಮಾಹಿತಿ

    ಅಂತಹ ತೊಂದರೆ ಇಲ್ಲ ಕೆಲಸ ಮಾಡುತ್ತೇನೆ. ಸವಾಲು ಅಂತ ಏನೂ ಇಲ್ಲ. ನಾವು ಜನಸಮುದಾಯಕ್ಕೆ ಭರವಸೆ ಕೊಟ್ಟಿದ್ದೇವೆ. ಅದಕ್ಕೆ ಸ್ಪಂದಿಸಿ ಜನ ನಮಗೆ ಮತ ಹಾಕಿದ್ದಾರೆ. ಎಲ್ಲ ಸಚಿವರು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಅಂತ ಸಿಎಂ ಕಿವಿಮಾತು ಹೇಳಿದ್ದಾರೆ ಎಂದೂ ತಿಳಿಸಿದರು.

    ಇದನ್ನೂ ಓದಿ: ಒಂಟಿಯಾಗಿದ್ದ, 3 ಮಕ್ಕಳ ವೃದ್ಧತಾಯಿ ಕೋಣೆಯಲ್ಲಿ ಶವವಾಗಿ ಪತ್ತೆ!; ಪ್ರಕರಣ ಸಂಬಂಧ 5 ತಂಡಗಳ ರಚನೆ

    ನಮ್ಮ ಮೇಲೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಸರಿಸಮಾನವಾಗಿ ಕೆಲಸ ಮಾಡೋಣ ಅಂತ ಹೇಳಿದ್ದಾರೆ. ಗ್ಯಾರಂಟಿ ಅನುಷ್ಠಾನ ವಿಚಾರವಾಗಿ ಜನ ಸಮುದಾಯದಲ್ಲಿ ಗೊಂದಲ ಸೃಷ್ಟಿ ಮಾಡಬೇಕು ಅನ್ನೋದು ವಿಪಕ್ಷಗಳ ಉದ್ದೇಶ ಅಂತ ಕಾಣುತ್ತೆ. ನಾವು ಮೊದಲನೇ ಕ್ಯಾಬಿನೆಟ್​​ನಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದೇವೆ. ಅದರ ಪ್ರಕಾರ ಆದೇಶ ಹೊರಡಿಸಿದ್ದೇವೆ. ಯಾವ ಯಾವ ಇಲಾಖೆಗೆ ಯಾವ ಯಾವ ಗ್ಯಾರಂಟಿ ಬರುತ್ತದೆ ಎಂದು ನೋಡಿ ಅದನ್ನು ಜಾರಿ ಮಾಡಲು ಹೇಳಿದ್ದೇವೆ ಎಂದು ತಿಳಿಸಿದರು.

    ಇದನ್ನೂ ಓದಿ: ಪತಿಗಿಂತ ಪತ್ನಿಗೇ ಹೆಚ್ಚು ಸಂಪಾದನೆ; ಜೀವನಾಂಶ ನೀಡಲಾಗದು ಎಂಬುದನ್ನು ಎತ್ತಿ ಹಿಡಿದ ಕೋರ್ಟ್

    ಜೂ.1ರ ಕ್ಯಾಬಿನೆಟ್ ಸಭೆಯಲ್ಲಿ ಎಲ್ಲವೂ ತೀರ್ಮಾನ ಆಗಲಿದೆ. ನಿಯಮಾವಳಿಗಳನ್ನು ರೂಪಿಸಿ ಗ್ಯಾರಂಟಿ ಕೊಡಲಾಗುವುದು. ದನ್ನೆಲ್ಲ ಬಿಟ್ಟು ಹಾಗೆ ಕೊಟ್ಟಬಿಡಿ ಅಂತ ಬೊಮ್ಮಾಯಿ ಹೇಳುತ್ತಿದ್ದಾರೆ ಅವರಾದರೆ ಹಾಗೇ ಕೊಡುತ್ತಿದ್ದರಾ ಎಂದೂ ಪರಮೇಶ್ವರ್ ಪ್ರಶ್ನಿಸಿದ್ದಾರೆ.

    ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts