More

    ಕರೋಪಾಡಿಯಲ್ಲಿ ತಡವಾದ ಮತದಾನ


    ಪುತ್ತೂರು: ಜನ ಮತದಾನ ಪ್ರಕ್ರಿಯೆಯಲ್ಲಿ ಬೆಳಗ್ಗೆ ಉತ್ಸಾಹದಿಂದ ಪಾಲ್ಗೊಂಡಿದ್ದು, ಬಿಸಿಲಿನ ಝಳ ಹೆಚ್ಚುತ್ತಿದ್ದಂತೆ ನಿರುತ್ಸಾಹ ಕಂಡು ಬಂದಿದೆ. ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಉಳಿದಂತೆ ಶಾಂತಿಯುತ ಮತದಾನ ನಡೆದಿದೆ.


    ವಿಟ್ಲ ಭಾಗದ ಕರೋಪಾಡಿಯ ಮತಗಟ್ಟೆ ಸಂಖ್ಯೆ ೨೪೦ರಲ್ಲಿ ಮತಯಂತ್ರ ಸಮಸ್ಯೆಯಿಂದ ಒಂದು ಗಂಟೆ ಮತದಾನ ತಡವಾಗಿದೆ. ಮತಗಟ್ಟೆ ಸಂಖ್ಯೆ ೨೩೮ರಲ್ಲಿ ಮತಯಂತ್ರ ೨೦ ನಿಮಿಷ ಮತದಾನದಲ್ಲಿ ವಿಳಂಬವಾಗಿದೆ. ಸಂಜೆ ಜನರು ಬರದ ಹಿನ್ನೆಲೆಯಲ್ಲಿ ಸಮಯಕ್ಕೆ ಮುಕ್ತಾಯ ಮಾಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶ್ಯಾಡೋ ಮತಗಟ್ಟೆ ಎಂದು ಗುರುತಿಸಲಾದ ಪೆರುವಾಯಿ ಕೊಲ್ಲತ್ತಡ್ಕ ದ.ಕ. ಜಿಲ್ಲಾ ಪಂಚಾಯಿತಿ ಶಾಲೆಯಲ್ಲಿ ಉತ್ಸಾಹದಿಂದ ಮತದಾನ ನಡೆದಿದೆ.

    ಶಾಸಕರಿಂದ ಆಂಬುಲೆನ್ಸ್ ವ್ಯವಸ್ಥೆ
    ಅನಾರೋಗ್ಯದಿಂದ ಇರುವ ಮತ್ತು ಅಶಕ್ತ ಮತದಾರರಿಗೆ ಹಕ್ಕು ಚಲಾಯಿಸಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಅದರ ಮೂಲಕ ಮತದಾರರನ್ನು ಕರೆದೊಯ್ಯಲಾಯಿತು. ಬೂತ್ ಸಂಖ್ಯೆ ೭೦ರಲ್ಲಿ ಸತ್ಯಮ್ಮ ಎಂಬ ಅನಾರೋಗ್ಯ ಪೀಡಿತ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಮತ ಚಲಾಯಿಸಲಾಯಿತು.

    ಆಯೋಗದಿಂದ ವಾಹನ ವ್ಯವಸ್ಥೆ
    ಮತಗಟ್ಟೆಗಳಿಗೆ ಬರಲು ಅನನುಕೂಲರಾದ ಹಿರಿಯ ನಾಗರಿಕರಿಗೆ ಚುನಾವಣಾ ಆಯೋಗ ವಿಶೇಷವಾಹನ ವ್ಯವಸ್ಥೆ ಮಾಡುವ ಮೂಲಕ ವಿನೂತ ಪ್ರಯತ್ನ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ನೇತೃತ್ವದಲ್ಲಿ ನಡೆದಿದೆ. ಮನೆಯಿಂದ ಅಶಕ್ತರನ್ನು ಕರೆದುಕೊಂಡು ಹೋಗಿ ಮತದಾನ ಮಾಡಿಸಿ ಮರಳಿ ಮನೆಗೆ ಬಿಡಲಾಗಿದೆ. ಕೆಲವು ಮಂದಿ ತಮ್ಮ ವಾಹನಗಳಲ್ಲೇ ಹೋವುದಾಗಿಯೂ ಉತ್ತರ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts