ಈಜಿನ ಮೋಜು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಮಂದಿಯ ಮರಣ..

Lake
ರಾಮನಾಥಪುರ ಕೆರೆ ಬಳಿ ಪೊಲೀಸರಿಂದ ಪರಿಶೀಲನೆ, ಜಮಾಯಿಸಿರುವ ಜನರು.
Published on

ಬೆಂಗಳೂರು/ಕೋಲಾರ: ರಾಜ್ಯದಲ್ಲಿ ಇಂದು ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈಜಿನ ಮೋಜಿಗೆ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಈ ಪ್ರಕರಣ ನಡೆದಿದೆ.

ದೇವನಹಳ್ಳಿ ತಾಲೂಕಿನ ರಾಮನಾಥಪುರ ಕೆರೆಯಲ್ಲಿ ನಾಲ್ವರು ಯುವಕರು ಸಾವಿಗೀಡಾಗಿದ್ದಾರೆ. ಕೆರೆ ದಡದಲ್ಲಿ ಪತ್ತೆಯಾದ ಬಟ್ಟೆ ಹಾಗೂ ಚಪ್ಪಲಿಗಳ ಹಿನ್ನೆಲೆಯಲ್ಲಿ ಅನುಮಾನ ಉಂಟಾಗಿ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕಾರ್ಯಾಚರಣೆ ನಡೆಸಿದಾಗ ಯುವಕರ ಶವಗಳು ಸಿಕ್ಕಿವೆ. ಮೃತರ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಮತ್ತೊಂದೆಡೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಗೋಣಮಕನಹಳ್ಳಿ ಗ್ರಾಮದ ನಿವಾಸಿಗಳಾದ ಕಾರ್ತಿಕ್ (14) ಮತ್ತು ಲೋಕೇಶ್ವರಿ(11) ಸಾವಿಗೀಡಾಗಿದ್ದಾರೆ. ಇವರು ಬೇಸಿಗೆ ರಜೆ ಇದ್ದ ಕಾರಣ ಹಾಗೂ ಮನೆಯಲ್ಲಿ ಯಾರೂ ಇರದ್ದರಿಂದ ಗೋಣಮಕನಹಳ್ಳಿ ಪಕ್ಕದಲ್ಲಿರುವ ಸೂರಹಳ್ಳಿ ಕೆರೆಯಲ್ಲಿ ಈಜಲು ಹೋಗಿದ್ದರು. ಆದರೆ ಅಲ್ಲಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಅಂಡರ್​​ಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net