

ಹಿಂದೂಧರ್ಮದ ಜ್ಞಾನ ಪರಂಪರೆಯಲ್ಲಿ ಋಷಿಗಳು, ಸಾಧಕರು, ಸತ್ಪುರುಷರು, ಮೇಧಾವಿಗಳು ಜ್ಯೋತಿಷ್ಯ ಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ತಮ್ಮ ಇಡೀ ಜೀವನವನ್ನು ಗ್ರಹಗಳ ಚಲನೆ, ಪ್ರಕೃತಿಯ ವ್ಯತ್ಯಾಸ, ವಾತಾವರಣದ ಬದಲಾವಣೆ, ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ನಿರಂತರವಾಗಿ ಗಮನಿಸಿ ಅಧ್ಯಯನ ಮಾಡಿದ್ದಾರೆ. ಆ ಪ್ರಾಚೀನ ಜ್ಯೋತಿಷ್ಯ ಶಾಸ್ತ್ರದಲ್ಲಿ ತ್ರಿಗ್ರಹಯೋಗ, ಚತುರ್ಗ್ರಹಯೋಗ, ಪಂಚಗ್ರಹಯೋಗ, ಷಡ್ಗ್ರಹಯೋಗ, ಅಷ್ಟಗ್ರಹ ಕೂಟ ಇತ್ಯಾದಿಗಳನ್ನು ವಿಶೇಷವಾಗಿ ವಿವರಿಸಲಾಗಿದೆ.
ಏನಿದು ಷಡ್ಗ್ರಹಯೋಗ?: ಷಡ್ಗ›ಹಯೋಗ ( ಷಡ್ಗ್ರಹಯುತಿ) ಎಂದರೆ ಆರು ಗ್ರಹಗಳು ಒಂದೇ ರಾಶಿಯಲ್ಲಿ ಸೇರುವ ಘಟನೆ. ಈ ಯೋಗ ಯಾವ ರಾಶಿಯಲ್ಲಿ ಸಂಭವಿಸುತ್ತದೆ ಎಂಬುದರ ಆಧಾರದ ಮೇಲೆ ಅದರ ಪ್ರಭಾವವನ್ನು ವಿಶ್ಲೇಷಿಸಲಾಗುತ್ತದೆ. ಸಾಮಾನ್ಯವಾಗಿ, ಈ ಯೋಗವು ಭಾರೀ ಸಂಜಾತ ಅಥವಾ ವಿಪ್ಲವಕಾಲಕ್ಕೆ ಇಣುಕುವ ಸೂಚನೆಯನ್ನು ನೀಡುತ್ತದೆ.
ಇತಿಹಾಸದಲ್ಲಿ ಗ್ರಹಯುತಿ ಯೋಗಗಳ ಪರಿಣಾಮಗಳು: 1939ರ ಏಪ್ರಿಲ್ 20: ಮೀನ ಮತ್ತು ಮೇಷ ರಾಶಿಗಳಲ್ಲಿ ಚತುರ್ಗ್ರಹ ಹಾಗೂ ತ್ರಿಗ್ರಹಯುತಿ ಉಂಟಾಗಿ ಕೆಲವೇ ತಿಂಗಳೊಳಗೆ ದ್ವಿತೀಯ ವಿಶ್ವಯುದ್ಧ ಪ್ರಾರಂಭವಾಯಿತು.
1947ರ ಆಗಸ್ಟ್ 14-15: ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಸಮಯದಲ್ಲಿ ಪಂಚಗ್ರಹಯೋಗ ಕರ್ಕರಾಶಿಯಲ್ಲಿ ಇತ್ತು. ಇದರಿಂದಾಗಿ ಭಾರತ ವಿಭಜನೆಯಾಗಿದ್ದು, ಅಪಾರ ಹಾನಿ, ಮಾರಣಹೋಮಗಳು, ಹತ್ಯಾಕಾಂಡಗಳು, ಯುದ್ಧಗಳು ಸಂಭವಿಸಿದವು.
2019ರ ಡಿಸೆಂಬರ್ 25: ಪಂಚಗ್ರಹಯೋಗದ ಸಂದರ್ಭದಲ್ಲಿ ಡಿಸೆಂಬರ್ 31ರಂದು ಕೋವಿಡ್-19 ವೈರಸ್ ಚೀನಾದ ವುಹಾನ್ನಲ್ಲಿ ಹರಡಿತು. ಇದರ ಪರಿಣಾಮವನ್ನು ಇಡೀ ಜಗತ್ತು ಅನುಭವಿಸಿತು.
ಈ ಸಲದ ಷಡ್ಗ್ರಹಯೋಗ ಪರಿಣಾಮಗಳು: ಪ್ರಸಕ್ತ ವರ್ಷದ ಫಾಲ್ಗುಣ ಮಾಸ ಅಮಾವಾಸ್ಯೆ ಅಂದರೆ 2025ರ ಮಾರ್ಚ್ 29ರ ಬೆಳಗ್ಗೆ 5.25ಕ್ಕೆ ಶನಿ ಗ್ರಹವು ಕುಂಭರಾಶಿಯಿಂದ ಮೀನರಾಶಿಗೆ ಪ್ರವೇಶ ಮಾಡಲಿದೆ.
ಮೀನ, ಮೇಷ, ಸಿಂಹ, ಧನು ರಾಶಿಗಳ ಮೇಲೆ ಈ ಯೋಗದ ಪರಿಣಾಮ ಅತ್ಯಧಿಕವಾಗಿರಲಿದೆ. ಪ್ರಾಚೀನ ವರಾಹಮಿಹಿರಾಚಾರ್ಯ ಸಂಹಿತೆಯಲ್ಲಿ ಗೋಚಾರ ಫಲಗಳನ್ನು ವಿವರಿಸಿದ್ದು, ಈ ಬಾರಿ ಮೀನ, ಮೇಷ, ಸಿಂಹ, ಧನು ರಾಶಿಗಳ ಮೇಲೆ ವಿಶೇಷ ಪರಿಣಾಮವಿದೆ. ದ್ವಾದಶ ರಾಶಿಗಳು ಮೇಲೆ ಷಡ್ಗ್ರಹಯೋಗ ಗ್ರಹ ಫಲಗಳು ಇಂತಿವೆ.
1. ಶಾಂತಿ ಹೋಮ ಮತ್ತು ಪಾರಾಯಣ:
2. ದಾನ: ? ನವಗ್ರಹ ಧಾನ್ಯ ? ಎಳ್ಳು, ಎಳ್ಳೆಣ್ಣೆ, ಕಬ್ಬಿಣದ ಪಾತ್ರೆ ? ನವಗ್ರಹ ವಸ್ತ್ರ ? ಅನ್ನದಾನ 3. ವಿಶೇಷ ಆರಾಧನೆ: ಶನಿ, ಹನುಮಂತ, ದುರ್ಗೆ, ನರಸಿಂಹ ದೇವರ ಪೂಜೆ ? ಪ್ರದಕ್ಷಿಣೆ, ನೈವೇದ್ಯ ಸೇವೆ ? ಕುಲದೇವರ ಆರಾಧನೆ
1) ಷಡ್ಗ್ರಹಯೋಗ ಶಾಂತಿ
2) ಸಂಪೂರ್ಣ ನವಗ್ರಹ ಹೋಮ
3) ನರಸಿಂಹ ಮಂತ್ರ ದುರ್ಗಾ ಮಂತ್ರ ಹೋಮ
4) ಶನಿ ಶಾಂತಿ
4. ಮೀನ ಹಾಗೂ ಸಿಂಹ ರಾಶಿಯವರಿಗೆ ವಿಶೇಷ ಜಾಗ್ರತೆ:
ಮೀನರಾಶಿ: ಜನ್ಮ ಶನಿಯ ಪರಿಣಾಮ ಎರಡೂವರೆ ವರ್ಷ. ಸಿಂಹರಾಶಿ: ಅಷ್ಟಮ ಶನಿಯ ಪರಿಣಾಮ ಎರಡು ವರ್ಷ. ಹೀಗಾಗಿ, ಈ ಷಡ್ಗ›ಹಯೋಗದ ದುಷ್ಪ್ರಭಾವ ಕಡಿಮೆ ಮಾಡಲು ಪರಿಹಾರ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ. ಭಯ ಬೇಡ ಎಚ್ಚರಿಕೆ ಇರಲಿ. ಧರ್ಮಕಾರ್ಯಗಳಿಂದ ಪುಣ್ಯ ಸಂಪಾದನೆ ಮಾಡಿ. ಮಂತ್ರಸಿದ್ಧಿಗೆ ಅತ್ಯುತ್ತಮ ಕಾಲ.