ಕರೊನಾ ವೈರಸ್​ ಸೋಂಕಿತ ಸಹೋದ್ಯೋಗಿಯೊಂದಿಗೆ ಸೆಲ್ಫೀ: ಉನ್ನತ ಅಧಿಕಾರಿಗಳಿಂದ ಸಿಕ್ಕಿತು ಅಮಾನತು ಭಾಗ್ಯ

sry
Published on

ಕರಾಚಿ: ಕರೊನಾ ವೈರಸ್​ ಸಾಂಕ್ರಾಮಿಕವೆಂದು ಘೋಷಣೆ ಮಾಡಲಾಗಿದೆ. ಹಾಗಿದ್ದರೂ ಸೋಂಕಿತ ವ್ಯಕ್ತಿಯೊಂದಿಗೆ ಸೆಲ್ಫೀ ತೆಗೆದುಕೊಂಡ ಸಹೋದ್ಯೋಗಿಗಳನ್ನು ಪಾಕಿಸ್ತಾನದ ಸರ್ಕಾರ ಅಮಾನತು ಮಾಡಿದೆ.

ಇರ್ಷಾದ್ ಅಲಿ ರಾಜ್‌ಪರ್ ಹೆಸರಿನ ವ್ಯಕ್ತಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಇರಾನ್​ಗೆ ಪ್ರವಾಸ ಕೈಗೊಂಡು ಬಂದಿದ್ದ. ಆತ ಪಾಕಿಸ್ತಾನಕ್ಕೆ ಮರಳಿದ ನಂತರ ಆತನಲ್ಲಿ ಸೋಂಕಿರುವುದು ಪತ್ತೆಯಾಗಿದೆ. ಆತನಲ್ಲಿ ಸೋಂಕಿದೆ ಎಂದು ತಿಳಿದ ನಂತರವೂ ಆತನ ಸಹೋದ್ಯೋಗಿಗಳು ಆತನೊಂದಿಗೆ ಸೆಲ್ಫೀ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ಸೋಂಕಿತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರ ಮೂಲಕ ವಿಷಯ ತಿಳಿದುಕೊಂಡ ಉನ್ನತ ಅಧಿಕಾರಿಗಳು ಸೆಲ್ಫೀ ತೆಗೆದುಕೊಂಡ ಆರು ಸಹೋದ್ಯೋಗಿಗಳನ್ನು ಅಮಾನತು ಮಾಡಿದ್ದಾರೆ. ಖೈರ್​ಪುರ್​ ಜಿಲ್ಲೆಯ ಉಪ ವಕ್ತಾರರು ಆರು ಜನ ಜಿಲ್ಲಾಡಳಿತದ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ಆದೇಶ ಹೊರಡಿಸಿದ್ದಾರೆ.

ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಸೋಂಕಿತರ ಸಂಖ್ಯೆ 800ರ ಗಡಿ ದಾಟಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ಖೈರ್​ಪುರದ ಸಿಂಧ್​ ನಗರವೊಂದರಲ್ಲೇ 350ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ನಗರದಾದ್ಯಂತ ಇಂದಿನಿಂದ 15 ದಿನಗಳ ಕಾಲ ಲಾಕ್​ ಡೌನ್​ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net