ಅಕ್ರಮ ಗೋಮಾಂಸ ಸಾಗಾಟ: 6 ಜನರ ಬಂಧನ! Transporting Beef

untitled-design-2025-10-08t153621835-68e637a78d489
Published on

Transporting Beef: ಅಕ್ರಮವಾಗಿ ಗೋಮಾಂಸ ಸಾಗಾಣೆ ಮಾಡುತ್ತಿದ್ದ 6 ಜನರನ್ನು ಮಧ್ಯಪ್ರದೇಶದ ಪರ್ವಾಲಿಯ ಪೊಲೀಸರು ಮಂಗಳವಾರ (ಅ.6) ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳನ್ನು ಶಹಜಹಾನಾಬಾದ್ ನಿವಾಸಿ ಶಾಹಿದ್ ನೂರ್ ಮನ್ಸೂರಿ (31), ಡ್ಯಾನಿಶ್ ಖುರೇಷಿ (22), ಕಾಶಿಫ್ (35), ಅಹಾದ್ ನೂರ್ (33), ಫರ್ಹಾನುದ್ದೀನ್ (23) ಸೆಹೋರ್‌ನ ಮುಬೀನ್ ಅಲಿ (20) ಎಂದು ಗುರುತಿಸಲಾಗಿದೆ.

ಸೋಮವಾರ ಹಸುವಿನ ತಲೆ, ಕಾಲುಗಳು, ಚರ್ಮ ಸೇರಿದಂತೆ ಒಂದು ಕ್ವಿಂಟಲ್​ಗೂ ಹೆಚ್ಚು ಮಾಂಸವನ್ನು ಹೊಂದಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅಕ್ರಮವಾಗಿ ಗೋಮಾಂಸವನ್ನು ಸಾಗಿಸಲು ಈ ಕಾರನ್ನು ಬಳಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿಸಿದ್ದಾರೆ.

ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಿದ ನಂತರ, ಭೋಪಾಲ್ ಮತ್ತು ಸೆಹೋರ್‌ನ ವಿವಿಧ ಭಾಗಗಳಿಂದ ಆರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net