ರೈಲು ಡಿಕ್ಕಿಗೆ 6 ಆನೆಗಳು ಸ್ಥಳದಲ್ಲೇ ಸಾವು: ಪ್ರಯಾಣಿಕರು ಅಪಾಯದಿಂದ ಪಾರು..Train hits elephants

Train hits elephants
Published on

ಶ್ರೀಲಂಕಾ: (Train hits elephants ) ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ರೈಲು Passenger train ಡಿಕ್ಕಿ ಹೊಡೆದ ಪರಿಣಾಮ ಆರು ಆನೆಗಳು  ಸ್ಥಳದಲ್ಲೇ ಜೀವ ಬಿಟ್ಟಿದೆ. ಈ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.

ವನ್ಯಜೀವಿ ಅಭಯಾರಣ್ಯದ ಬಳಿ ರೈಲು ಹೋಗ್ತಿದ್ದ ವೇಳೆ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಶ್ರೀಲಂಕಾದ ಕೊಲಂಬೊ ನಗರದ ಪೂರ್ವಕ್ಕಿರುವ ಹಬರಾನಾ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ತೀವ್ರತೆಗೆ ನಾಲ್ಕು ಮರಿ ಆನೆಗಳು ಮತ್ತು ಎರಡು ವಯಸ್ಕ ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಅಪಘಾತದ ರಭಸಕ್ಕೆ ರೈಲು ಹಳಿ ತಪ್ಪಿದ್ದು, ಸದ್ಯ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಕರಣ ಸಂಬಂಧ ವನ್ಯಜೀವಿಗಳ ವಿಭಾಗ ತನಿಕೆ ಆರಂಭಿಸಿದೆ. ಮಿನ್ನೇರಿಯಾ ನ್ಯಾಷನಲ್ ಪಾರ್ಕ್​​ ತುಂಬಾನೇ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ಆನೆಗಳನ್ನು ನೋಡಲು ಸಫಾರಿಗೆ ಬರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net