

ಬೆಂಗಳೂರು: ಬಹುಕೋಟಿ ವಂಚನೆ ಆರೋಪಕ್ಕೆ ಗುರಿಯಾಗಿರುವ ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರ ಸೊಸೈಟಿಯಿಂದ ವಂಚನೆಗೆ ಒಳಗಾಗಿದ್ದರೇ ದೂರು ನೀಡುವಂತೆ ಸಿಐಡಿ ಸೂಚಿಸಿದೆ.
ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ಸೊಸೈಟಿ ಹೆಸರಿನಲ್ಲಿ ರಾಜೇಶ್ ನಾಗವಲ್ಲಿ, ನಂಜೇಶ ಬಾಬು, ಕಿಶನ್ ಸೇರಿಕೊಂಡು ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ವಿವಿಧ ರೂಪದಲ್ಲಿ ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದರು.
ಆನಂತರ ನಿಗದಿತ ಸಮಯದಲ್ಲಿ ಠೇವಣಿದಾರರಿಗೆ ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದು, ಈ ಬಗ್ಗೆ ಸುಬ್ರಮಣ್ಯಪುರ, ರಾಜರಾಜೇಶ್ವರಿನಗರ, ಬಸವೇಶ್ವರನಗರ, ಮೈಕೋ ಲೇಔಟ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಹೆಚ್ಚಿನ ತನಿಖೆಯನ್ನು ಸಿಐಡಿ ವಹಿಸಿಕೊಂಡಿದೆ. ಹೂಡಿಕೆದಾರರಿಗೆ ಹಣ ವಾಪಸ್ ಕೊಡದೆ ಸೊಸೈಟಿ ಮತ್ತು ಇನ್ನತ್ತರ ಹೆಸರಿನಲ್ಲಿ ಸ್ಥಿರ ಮತ್ತು ಚರಾಸ್ತಿಗಳನ್ನು ಖರೀದಿ ಮಾಡಿದ್ದಾರೆ. ಈ ಮೂಲಕ ಹೂಡಿಕೆದಾರರಿಗೆ ಮೋಸ ಮಾಡಿದ್ದಾರೆ. ಆಗಾಗಿ ಸೊಸೈಟಿ ಮತ್ತು ಆರೋಪಿತರ ಹೆಸರಿನಲ್ಲಿ ಸ್ಥಿರ ಮತ್ತು ಚರಾಸ್ತಿಗಳು ಕಂಡುಬಂದರೇ ಈ ಕೂಡಲೇ ಸಿಐಡಿಗೆ ಮಾಹಿತಿ ನೀಡಿ. ಇಲ್ಲಿಯವರೆಗೂ ದೂರು ಕೊಡದೆ ಇದ್ದರೇ ದೂರು ಕೊಡಲು ಅವಕಾಶ ಇರುವುದಾಗಿ ಸಿಐಡಿ ಅಧಿಕಾರಿಗಳು ಸೂಚಿಸಿದ್ದಾರೆ.
ಇಲ್ಲಿ ದೂರು ಸಲ್ಲಿಸಿ :
ತನಿಖಾಧಿಕಾರಿಗಳು ಮತ್ತು ಪೊಲೀಸ್ ಉಪಾಧೀಕ್ಷಕರು, ಎಎಚ್‌ಟಿ ಘಟಕ, ಕೊಠಡಿ ಸಂಖ್ಯೆ 110, ಅನೆಕ್ಸ್-1 ಬಿಲ್ಡಿಂಗ್, ಕಾರ್ಲ್‌ಟನ್ ಭವನ, ಸಿಐಡಿ ಕಚೇರಿ, ಅರಮನೆ ರಸ್ತೆ, ಬೆಂಗಳೂರು. ದೂರವಾಣಿ ಸಂಖ್ಯೆ 080-22094506 ಕರೆ ಮಾಡಬಹುದು.