

ಮುಂಬೈ: ಭಾರತ ಕ್ರಿಕೆಟ್ ತಂಡ ವೇಗಿ ಮತ್ತು RCB ಮಾಜಿ ಆಟಗಾರ ಮೊಹಮ್ಮದ್ ಸಿರಾಜ್ ತಮ್ಮ ವೃತ್ತಿ ಜೀವನದಲ್ಲಿ ಸದ್ದು ಮಾಡುತ್ತಿರುವಾಗಲೇ ಮಹಿರಾ ಶರ್ಮಾ ಎಂಬ ಮಹಿಳೆ ಜತೆ ಡೇಟಿಂಗ್ನಲ್ಲಿದ್ದಾರೆ (Dating) ಎಂಬ ಸುದ್ದಿಗಳು ಸೊಷಿಯಲ್ ಮೀಡಿಯಾದಲ್ಲಿ ಹರಿದಾಡ ತೊಡಗಿವೆ. ಈ ಮೂಲಕ ಕ್ರಿಕೆಟ್ ಅಲ್ಲದೆ, ಸಿರಾಜ್ ತಮ್ಮ ವೈಯಕ್ತಿಕ ಜೀವನದಲ್ಲಿ ಕೂಡ ಇತ್ತೀಚಿಗೆ ಸದ್ದು ಮಾಡುತ್ತಿದ್ದಾರೆ.
ಕ್ರಿಕೆಟ್ ವೃತ್ತಿ ಜೀವನಲ್ಲಿ ಆರ್ಸಿಬಿ ತಂಡದ ಮೂಲಕ ದೇಶ ಮತ್ತು ವಿದೇಶ ಕ್ರೀಡಾಂಗಣದಲ್ಲಿ ತಮ್ಮದೇ ಸ್ಟೈಲ್ನಲ್ಲಿ ಬೌಲಿಂಗ್ ಮಾಡುವ ಸಿರಾಜ್, ತಮ್ಮದೆ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಸೌದಿಯ ಜೆದ್ದಾದಲ್ಲಿ ನಡೆದ IPL 2025 ಹರಾಜು ಪ್ರಕ್ರಿಯೆಯಲ್ಲಿ 12.75 ಕೋಟಿ ರೂ. ಬೆಲೆಗೆ ಗುಜಾರಾತ್ ಟೈಟನ್ಸ್ ತಂಡದ ಪಾಲದರು. ಅಲ್ಲದೇ, RCB ಪ್ರಾಂಚೈಸಿ ತಮ್ಮನ್ನು ಮರಳಿ ಪಡೆದಯದೆ ಇದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ತಮ್ಮ ಇನ್ಸ್ಟಾಗ್ರಾಮ್ ಆಕೌಂಟ್ನಲ್ಲಿ ಆರ್ಸಿಬಿ ಜತೆಗಿನ 7 ವರ್ಷದ ಜರ್ನಿ ಬಗ್ಗೆ ಮತ್ತು ಆರ್ಸಿಬಿ ಅಭಿಮಾನಿಗಳ ಬಗ್ಗೆ ಭಾವುಕ ಮಾತುಗಳನ್ನಾಡಿದ್ದರು. ಇದೆಲ್ಲರ ನಡುವೆ ಇದೀಗ ಸಿರಾಜ್ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿ ಹರಿದಾಡುತ್ತಿವೆ.
ಸಿರಾಜ್, ಕಿರುತೆರೆ ನಟಿ ಮತ್ತು ಬಿಗ್ಬಾಸ್ ಖ್ಯಾತಿಯ ಮಹಿರಾ ಶರ್ಮಾ ಜತೆ ಡೇಟಿಂಗ್ನಲ್ಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಮಹಿರಾ ಶರ್ಮಾ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಸಿರಾಜ್ ಇಷ್ಟ ಪಡುತ್ತಿದ್ದಾರೆ. ಅವರ ಪೋಟೋಗಳಿಗೆ ಮತ್ತು ಪ್ರತಿ ಪೋಸ್ಟ್ಗಳಿಗೆ ಲೈಕ್ ಮಾಡುತ್ತಿದ್ದಾರೆ. ಇದೀಗ, ಇದೇ ವಿಷಯ ಇಟ್ಟುಕೊಂಡು ಅಭಿಮಾನಿಗಳು ಮತ್ತು ನೆಟ್ಟಿಗರು ಸಿರಾಜ್ ಮತ್ತು ಮಹಿರಾ ಶರ್ಮಾ ಡೇಟಿಂಗ್ನಲ್ಲಿದ್ದಾರೆ ಎನ್ನುತ್ತಿದ್ದಾರೆ. ಸಿರಾಜ್ ಮತ್ತು ಮಹಿರಾ ಇಬ್ಬರೂ ಈವರೆಗೆ ಒಟ್ಟಾಗಿ ಕಾಣಿಸಿಲ್ಲವಾದರೂ ಅಭಿಮಾನಿಗಳು ಮಾತ್ರ ಇಬ್ಬರಿಗೆ ಲಿಂಕ್ ಮಾಡುತ್ತಿದ್ದಾರೆ. ಆದರೆ, ಇದು ವಂದಂತಿ ಎಂದು ಹೇಳಲಾಗುತ್ತಿದೆ.
ಇನ್ನು ಮಹಿರಾ ಶರ್ಮಾ ವಿಷಯಕ್ಕೆ ಬರುವುದಾರೆ ಕಿರುತೆರೆಯಲ್ಲಿ ನಟನೆ ಮಾಡುತ್ತಿದ್ದು, ಬಿಗ್ಬಾಸ್ ಸೀಸನ್ 13ರಲ್ಲಿ ಖ್ಯಾತಿ ಪಡೆದರು. ಅಲ್ಲದೆ, ಅದೇ ಬಿಗ್ಬಾಸ್ ಖ್ಯಾತಿ ಪರಾಸ್ ಛಪ್ರಾ ಎಂಬುವವರ ಜತೆ ಡೇಟಿಂಗ್ನಲ್ಲಿದ್ದರು. ಆಗ ಸಾರ್ವಜನಿಕ ವಲಯದಲ್ಲಿ ಸದ್ದು ಮಾಡಿದ್ದರು. ಪರಾಸ್ ಅವರ ಜತೆಗಿನ ಸಂಬಂಧ 2023ರಲ್ಲಿ ಕೊನೆಗೊಂಡಿದ್ದು, ವಿವಿಧ ಕಾರಣಗಳಿಂದ ದೂರವಾದರು. ಇವರ ಇನ್ಸ್ಟಾ ಪೋಸ್ಟ್ಗಳಿಗೆ ಸಿರಾಜ್ ಲೈಕ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.(ಏಜೆನ್ಸೀಸ್).