ಸಿಎಂ ಬಳಿ ‘ಸರ್, ನನಗೆ ಐಫೋನ್ ಬೇಕು’ ಎಂದ ಭೂಪ; ಹಿಮಂತ ಶರ್ಮಾ ಕೊಟ್ಟ ರಿಯಾಕ್ಷನ್ ವೈರಲ್! | Assam CM viral video

ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಅವರನ್ನು ಭೇಟಿಯಾದ ವ್ಯಕ್ತಿಯೊಬ್ಬ ನೇರವಾಗಿ ಐಫೋನ್ ಕೇಳಿದ್ದಾನೆ. ಇದಕ್ಕೆ ಸಿಎಂ ನೀಡಿದ ತಮಾಷೆಯ ಪ್ರತಿಕ್ರಿಯೆಯ ವಿಡಿಯೋ ಈಗ ವೈರಲ್ ಆಗಿದೆ.
Man asked CM iPhone
ಸಿಎಂ ಹಿಮಂತ ಬಿಸ್ವ ಶರ್ಮಾ ಬಳಿ ನೇರವಾಗಿ ಐಫೋನ್ ಕೇಳಿದ ವ್ಯಕ್ತಿ
Published on: 

Men asked iPhone: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಜನಸಂಪರ್ಕ ಕಾರ್ಯಕ್ರಮದ ವೇಳೆ ನಡೆದ ಮಜಾದಾಯಕ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರನ್ನು ಭೇಟಿಯಾಗಿ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಿಎಂ ಬಳಿ ನೇರವಾಗಿ ‘ಸರ್, ನನಗೆ ಐಫೋನ್ ಬೇಕು’ ಎಂದು ಕೇಳಿದ್ದಾನೆ.

ವ್ಯಕ್ತಿಯ ಮಾತು ಕೇಳಿ ಕ್ಷಣಕಾಲ ಅಚ್ಚರಿಗೊಂಡ ಹಿಮಂತ ಶರ್ಮಾ, ‘ಐಫೋನ್? ಹಳೆಯದು ಬೇಕಾ, ಹೊಸದು ಬೇಕಾ?’ ಎಂದು ತಮಾಷೆಯಾಗಿ ಕೇಳಿದ್ದಾರೆ.

ಐಫೋನ್ ಕೊಡಿಸುತ್ತೇನೆ ಎಂದ ಸಿಎಂ

ಇದಾದ ಬಳಿಕ ಮಾತುಕತೆ ಇನ್ನಷ್ಟು ಫನ್ನಿಯಾಗಿ ತಿರುಗಿದೆ. ಹಿಮಂತ ಶರ್ಮಾ ಕೈ ಎತ್ತಿ ತಮಾಷೆಗೆ ಹೊಡೆಯುವಂತೆ ಮಾಡಿದರೂ, ಕೊನೆಗೆ ‘ಸರಿ, ನಿಮಗೆ ಐಫೋನ್ ಕೊಡಿಸುತ್ತೇವೆ. ಸಿಗುತ್ತೆ’ ಎಂದು ಹೇಳಿದ್ದಾರೆ. ಬಳಿಕ ಅವರು ಅಲ್ಲಿದ್ದ ಮತ್ತಷ್ಟು ಜನರನ್ನು ಭೇಟಿಯಾಗಲು ಹೋದರು.

ವಿಡಿಯೋ ಹಂಚಿಕೊಂಡ ಹಿಮಂತ ಶರ್ಮಾ

ಈ ವಿಡಿಯೋವನ್ನು ಹಿಮಂತ ಶರ್ಮಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಆದ್ಯತೆಗಳು ತುಂಬಾ ಸ್ಪಷ್ಟ’ ಎಂದು ಚಿಕ್ಕದಾಗಿ ಕ್ಯಾಪ್ಷನ್ ಹಾಕಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವ್ಯಕ್ತಿಯ ಧೈರ್ಯದ ಬಗ್ಗೆ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಜೀವದ ಹಂಗು ತೊರೆದು 174 ಜನರ ರಕ್ಷಣೆ; ಸ್ಮಿತ್ ಧೈರ್ಯಕ್ಕೆ ಶಾರುಖ್ ಸಲಾಂ​! | Shah Rukh Khan

ಕೆಲವರು ಹಿಮಂತ ಶರ್ಮಾ ಅವರ ಪ್ರತಿಕ್ರಿಯೆಯನ್ನು ಮೆಚ್ಚಿದ್ದರೆ, ಇನ್ನು ಕೆಲವರು ‘ನಿಜವಾಗಿಯೂ ಐಫೋನ್ ಸಿಕ್ಕಿತಾ?’ ಎಂದು ಪ್ರಶ್ನಿಸಿದ್ದಾರೆ. ಈ ನಡುವೆ, ಸಿಎಂ ಬಳಿ ಇಷ್ಟು ನೇರವಾಗಿ ಐಫೋನ್ ಕೇಳಿದ ವ್ಯಕ್ತಿಯ ಆತ್ಮವಿಶ್ವಾಸದ ಬಗ್ಗೆಯೂ ನೆಟ್ಟಿಗರು ತಮಾಷೆ ಮಾಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net