Singles Day ಆಚರಿಸಲು ಇಲ್ಲಿ ಸಿಗುತ್ತೆ ರಜೆ! ಏನಿದು ಸಿಂಗಲ್​ಗಳ ಹವಾ? ಇಲ್ಲಿದೆ ಮಾಹಿತಿ

Bbau - 2025-11-11T122122.022
Published on

ಚೀನಾ: ಸಾಮಾನ್ಯವಾಗಿ ಪ್ರತಿ ಆಚರಣೆಗೂ ಅದರದೇ ಆದ ವಿಶೇಷತೆ ಇದೆ. ಹೀಗಾಗಿ, ತಿಂಗಳಲ್ಲಿ ಕೆಲವಷ್ಟು ದಿನಗಳನ್ನು ವಿಶೇಷ ದಿನಗಳನ್ನಾಗಿ ಆಚರಣೆ ಮಾಡಲಾಗುತ್ತದೆ. ಉದಾಹರಣೆ ಲವರ್ಸ್​ ಡೇ, ಫದರ್ಸ್​ಮತ್ತು ಮದರ್ಸ್​ ಡೇಗಳನ್ನು ಆಚರಣೆ ಮಾಡಲಾಗುತ್ತದೆ. ಆದಾಗ್ಯೂ, ಕೆಲ ಕಡೆ ಸಿಂಗಲ್​ಗಳಿಗಾಗಿಯೇ ಸಿಂಗಲ್​ ಡೇ(Singles Day) ಆಚರಣೆ ಕೂಡ ಮಾಡಲಾಗುತ್ತದೆ.

ಹೌದು, ಈ ಸಿಂಗಲ್ಸ್​ ಡೇ ಹಿನ್ನೆಲೆ ಏನು?, ಆಚರಣೆ ಯಾಕೆ, ಯಾವ ದೇಶದಲ್ಲಿ ಆಚರಣೆ ಮಾಡಲಾಗುತ್ತದೆ ಎಂಬುದು ನೋಡೋಣ..

ಚೀನಾದಲ್ಲಿ ಆಚರಣೆ ಅದ್ದೂರಿ!

ಪ್ರತಿ ವರ್ಷ ನ.11 ರಂದು ಸಿಂಗಲ್ಸ್​ ಡೇ ಅನ್ನು ಆಚರಣೆ ಮಾಡಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಚೀನಾದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಇಂದು ಚೀನಾದಾದ್ಯಂತ ಬಹಳ ವಿಶೇಷ ಪ್ರಚಾರಗಳಿಂದ ಗುರುತಿಸಲ್ಪಟ್ಟದೆ. ನವೆಂಬರ್ 11 - ಅಂದರೆ 11/11 - ನಾಲ್ಕು ‘ಒನ್’ ಸಂಖ್ಯೆಗಳಿರುವ ಈ ದಿನವನ್ನು ಒಬ್ಬರಾಗಿ ಬದುಕುವವರ ಸ್ವಪ್ರೇಮದ ದಿನ ಎಂದು ಕರೆಯಲಾಗುತ್ತದೆ. ಅಲ್ಲದೆ, ಈ ಸಿಂಗಲ್ಸ್​ ಡೇ ಆಚರಣೆ ಮಾಡಲು ಚೀನಾದಲ್ಲಿ ರಜೆ ನೀಡಲಾಗುತ್ತದೆ.

ಸಿಂಗಲ್ಸ್ ಡೇ ಎಂದರೇನು?

ಸಿಂಗಲ್ಸ್ ಡೇ ಮೊದಲು ಚೀನಾದ ನಾಂಜಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ 1990ರ ದಶಕದಲ್ಲಿ ಆರಂಭಿಸಲಾಯಿತು. ಪ್ರೀತಿಯ ಹಬ್ಬವೆಂದರೆ ಸಾಮಾನ್ಯವಾಗಿ ಜೋಡಿಗಳೇ ನೆನಪಾಗುತ್ತಿದ್ದರು. ಆದರೆ, ಈ ವಿದ್ಯಾರ್ಥಿಗಳು “ಸಿಂಗಲ್ಸ್‌ಗೂ ತಮ್ಮದೇ ದಿನ ಇರಬೇಕು” ಎಂಬ ಆಲೋಚನೆಯಿಂದ ಈ ದಿನವನ್ನು ಪ್ರಾರಂಭಿಸಿದರು. 1990 ರ ದಶಕದಲ್ಲಿ ಒಂಟಿಯಾಗಿರುವುದನ್ನು ಆಚರಿಸಲು 11/11 ಅನ್ನು ಆಯ್ಕೆ ಮಾಡಿದಾಗ ಸಿಂಗಲ್ಸ್ ಡೇ ಹುಟ್ಟಿಕೊಂಡಿತು. ನಾಲ್ಕು (11.11) ದಿನಾಂಕವನ್ನು ಒಳಗೊಂಡಿರುವ ಈ ದಿನಾಂಕವು ಒಂಟಿ ವ್ಯಕ್ತಿಗಳು ಒಟ್ಟಿಗೆ ನಿಂತಿರುವುದನ್ನು ಸಂಕೇತಿಸುತ್ತದೆ. ವರ್ಷಗಳಲ್ಲಿ, ಇದು ಒಂಟಿ ಜೀವನವನ್ನು ಗೌರವಿಸುವ ಒಂದು ಮೋಜಿನ ಮಾರ್ಗವಾಯಿತು.

ವಿಶ್ವದಾದ್ಯಂತ ಇಂದು ಸಿಂಗಲ್ಸ್​ ಡೇ ಆಚರಣೆಮಾಡುವ ಅನೇಕ ಯುವಕ ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಿಂಗಲ್ಸ್​ ಡೇ ನಮ್ಮೊಳಗಿನ ಪ್ರೀತಿ ಮತ್ತು ಸ್ವೀಕೃತಿಯನ್ನು ಆಚರಿಸುವ ಒಂದು ದಿನ. ಒಬ್ಬರಾಗಿ ಇರುವುದು ದುಃಖದ ಲಕ್ಷಣವಲ್ಲ, ಅದು ಸ್ವತಂತ್ರತೆ ಮತ್ತು ಆತ್ಮವಿಶ್ವಾಸದ ಚಿಹ್ನೆ. ತಮ್ಮ ಜೀವನದ ಪಾಸಿಟಿವಿಟಿಯನ್ನು ಹಂಚಿಕೊಂಡು, “ನಾನು ಸಿಂಗಲ್ ಅಲ್ಲ, ನಾನು ಸಂಪೂರ್ಣ” ಎಂದು ಹೇಳಿಕೊಳ್ಳುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net