ಏಕರೂಪ ಟಿಕೆಟ್ ವ್ಯವಸ್ಥೆಗೆ ಭರದ ಸಿದ್ಧತೆ: ಮೆಟ್ರೋ, ಬಸ್ ಪ್ರಯಾಣಕ್ಕೆ ಒಂದೇ ಕಾರ್ಡ್, ವ್ಯವಸ್ಥೆ ನಿರ್ವಹಣೆಗೆ ಟೆಂಡರ್

Delhi metro
Published on

ಬೆಂಗಳೂರು: ಬಿಎಂಟಿಸಿ ಬಸ್ ಮತ್ತು ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆದಿದ್ದು, ವ್ಯವಸ್ಥೆ ನಿರ್ವಹಣೆಗಾಗಿ ಸಂಸ್ಥೆಗಳಿಂದ ಟೆಂಡರ್ ಕರೆಯಲಾಗಿದೆ.

ದೇಶಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಏಕರೂಪದ ಟಿಕೆಟ್ ವ್ಯವಸ್ಥೆ ಜಾರಿಗೆ ತರುವ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ದೆಹಲಿಯಲ್ಲಿ ಈಗಾಗಲೇ ಆ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದೇ ಮಾದರಿಯನ್ನು ಬೆಂಗಳೂರಿನಲ್ಲೂ ಅಳವಡಿಸಲಾಗುತ್ತಿದೆ. ಜನವರಿಯಲ್ಲೇ ಜಾರಿಗೊಳ್ಳಬೇಕಿದ್ದ ಈ ವ್ಯವಸ್ಥೆ ಹಲವು ಕಾರಣಗಳಿಂದ ವಿಳಂಬವಾಗಿತ್ತು. ಇದೀಗ ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಅಳವಡಿಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಬಿಎಂಆರ್​ಸಿಎಲ್ ಟೆಂಡರ್ ಕರೆದಿದ್ದು, ಶೀಘ್ರದಲ್ಲಿ ಜಾರಿಗೊಳಿಸಲಾಗುತ್ತದೆ.

ಎರಡೂ ಹಂತದಲ್ಲಿ ಜಾರಿ: ಈಗಾಗಲೇ ರೈಲು ಕಾರ್ಯಾಚರಣೆಗೊಂಡಿರುವ ಮೊದಲ ಹಂತದ 40 ನಿಲ್ದಾಣಗಳ ಜತೆಗೆ 2ನೇ ಹಂತದ 62 ನಿಲ್ದಾಣಗಳ ಪೈಕಿ 44 ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.

ಬಿಇಎಲ್​ನಿಂದ ಯಂತ್ರ ಪೂರೈಕೆ: ನಿಲ್ದಾಣಗಳಲ್ಲಿನ ಟಿಕೆಟ್ ಶುಲ್ಕ ಕಡಿತ ದ್ವಾರದಲ್ಲಿ ಆ ಯಂತ್ರ ಅಳವಡಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಕಾಮನ್ ಮೊಬಿಲಿಟಿ ಕಾರ್ಡ್​ನಿಂದ ಆಟೋಮ್ಯಾಟಿಕ್ ಟಿಕೆಟ್ ಶುಲ್ಕ ವಸೂಲಿ ಯಂತ್ರಗಳ ಪೂರೈಕೆ ಹೊಣೆಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ಗೆ ವಹಿಸಲಾಗಿದೆ.

ಆಸಕ್ತಿ ತೋರದ ಬಿಎಂಟಿಸಿ

ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಜಾರಿ ಕುರಿತು ಬಿಎಂಟಿಸಿ ಆಸಕ್ತಿ ತೋರಿಸುತ್ತಿಲ್ಲ. ಕಾಮನ್ ಮೊಬಿಲಿಟಿ ಕಾರ್ಡ್​ನಿಂದ ಟಿಕೆಟ್ ದರ ಕಡಿತ ಮಾಡಲು ಬೇಕಾಗುವ ಇಟಿಎಂ ಯಂತ್ರ ಖರೀದಿಸುವ ಪ್ರಕ್ರಿಯೆ ಈವರೆಗೆ ಚಾಲನೆ ದೊರೆತಿಲ್ಲ. ಒಟ್ಟು 6 ಸಾವಿರ ಇಟಿಎಂ ಯಂತ್ರಗಳನ್ನು ಖರೀದಿಸಬೇಕಿದೆ.

ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಜಾರಿ ಕುರಿತಂತೆ ಬಿಎಂಆರ್​ಸಿಎಲ್ ಮತ್ತು ಬಿಎಂಟಿಸಿ ಅಧಿಕಾರಿಗಳು ಹಲವು ಬಾರಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ತಿರ್ವನವಾದಂತೆ ಕಾರ್ಡ್​ಗಳ ವಿತರಣೆ ಮತ್ತು ನಿರ್ವಹಣೆಯ ಹೊಣೆ ಬಿಎಂಆರ್​ಸಿಎಲ್​ನದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net