

ಬೆಂಗಳೂರು : ಮುಖ್ಯಮಂತ್ರಿಗಳಿಗೆ ಏನಾದರೂ ಅಹವಾಲು ಸಲ್ಲಿಸಬೇಕು ಎಂದಾದರೆ ಬೇರೆ ಬೇರೆ ಇ-ಮೇಲ್ ಐಡಿಗಳಿಗೆ ಇನ್ನು ಇ-ಮೇಲ್ ಮಾಡಬೇಕಾಗಿಲ್ಲ. ಒಂದೇ ಒಂದು ಇ-ಮೇಲ್ ಐಡಿಗೆ ಕಳುಹಿಸಿದರೆ ಸಾಕು. ಜನವರಿ 1ರಿಂದ ಇದು ಚಾಲ್ತಿಗೆ ಬರಲಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಜನವರಿ ಒಂದರಿಂದ ಅಹವಾಲು ಸ್ವೀಕಾರಕ್ಕೆ cm.kar@nic.in ಇ-ಮೇಲ್ ಐಡಿಯನ್ನು ಮಾತ್ರ ಬಳಕೆಯಲ್ಲಿ ಇರಲಿದೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ 2020ರ ಆಗಸ್ಟ್ ತಿಂಗಳಿನಿಂದ ಇ-ಮೇಲ್ ಮೂಲಕ ಸ್ವೀಕೃತವಾಗುವ ಅಹವಾಲುಗಳನ್ನು ಇ-ಆಫೀಸ್ ನಲ್ಲಿಯೇ ನಿರ್ವಹಿಸಲಾಗುತ್ತಿದೆ. ಪ್ರಸ್ತುತ ಮುಖ್ಯಮಂತ್ರಿಗಳ ಸಚಿವಾಲಯವು 3 ಸಕ್ರಿಯ ಇ-ಮೇಲ್ ವಿಳಾಸಗಳನ್ನು ಹೊಂದಿದ್ದು, ಇದರಿಂದ ಅಹವಾಲು ಪುನರಾವರ್ತನೆಯಾಗುತ್ತಿದೆ ಹಾಗೂ ಅನಗತ್ಯ ಗೊಂದಲ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅಹವಾಲು ಸಲ್ಲಿಕೆ ಮತ್ತು ನಿರ್ವಹಣೆಯನ್ನು ಸರಳಗೊಳಿಸಲು ಏಕ ವಿಳಾಸವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಈ ಬದಲಾವಣೆಯನ್ನು ಗಮನಿಸಿ, ಮುಂದಿನ ದಿನಗಳಲ್ಲಿ ತಮ್ಮ ಅಹವಾಲು ಮತ್ತು ಇತರ ಸಂವಹನವನ್ನು cm.kar@nic.in ಮೇಲ್ ಐಡಿ ಮೂಲಕವೇ ಮಾಡುವಂತೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..