

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭಕ್ಕೆ ಶುಕ್ರವಾರ ಒಂದೇ ದಿನದಲ್ಲಿ ಎರಡೂವರೆ ಕೋಟಿಗೂ ಹೆಚ್ಚು ಡೋಸ್ಗಳ ದಾಖಲೆ ಲಸಿಕೀಕರಣ ನೆರವೇರಿತು. ಈ ದಾಖಲೆ ಸಂಖ್ಯೆಯು ಆಸ್ಟ್ರೇಲಿಯಾದ ಇಡೀ ಜನಸಂಖ್ಯೆಗೆ ಸಮನಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸರ್ಕಾರದ ಅಧಿಕೃತ ಟ್ವಿಟರ್ ಖಾತೆ ಮೈಗವ್ಇಂಡಿಯಾದಲ್ಲಿ ನೀಡಿರುವ ಚಿತ್ರಸಹಿತ ವರದಿಯ ಪ್ರಕಾರ ಭಾರತದಲ್ಲಿ ಸೆ. 17 ರಂದು ನೀಡಲಾದ ಒಟ್ಟು ಕರೊನಾ ಲಸಿಕೆ ಡೋಸ್ಗಳ ಸಂಖ್ಯೆಯು ಆಸ್ಟ್ರೇಲಿಯಾದ ಒಟ್ಟು 2.54 ಕೋಟಿಯಷ್ಟು ಜನಸಂಖ್ಯೆಗೆ ಸಮನಾಗಿದೆ. ಇದು ಕೆನಡಾದ 3.77 ಕೋಟಿ ಜನಸಂಖ್ಯೆಯ ಮೂರನೇ ಎರಡು ಭಾಗದಷ್ಟು ಹಾಗೂ ನ್ಯೂಜಿಲೆಂಡಿನ 48 ಲಕ್ಷ ಜನಸಂಖ್ಯೆಯ ಐದು ಪಟ್ಟಾಗಿದೆ ಎಂದು ಸರ್ಕಾರ ಹೇಳಿದೆ.
ಭಾರತದ ಒಂದು ದಿನದ ದಾಖಲೆ ಡೋಸ್ಗಳ ಸಂಖ್ಯೆಯು ಆಸ್ಟ್ರೇಲಿಯಾದಲ್ಲಿ ಈವರೆಗೆ ನೀಡಲಾಗಿರುವ ಡೋಸ್ಗಳಿಗಿಂತ (2.38 ಕೋಟಿ) ಹೆಚ್ಚಾಗಿದೆ. ಈಜಿಪ್ಟ್ನಲ್ಲಿ ನೀಡಲಾಗಿರುವ 1.22 ಡೋಸ್ಗಳಿಗೆ ದುಪ್ಪಟ್ಟಾಗಿದೆ ಮತ್ತು ನ್ಯೂಜಿಲೆಂಡಿನಲ್ಲಿ ನೀಡಲಾಗಿರುವ 46 ಲಕ್ಷ ಡೋಸ್ಗಳಿಗೆ ಐದು ಪಟ್ಟು ಹೆಚ್ಚಾಗಿದೆ ಎಂದು ಸರ್ಕಾರ ಹೇಳಿದೆ.(ಏಜೆನ್ಸೀಸ್)