More

    ಓಲಾ ಎಲೆಕ್ಟ್ರಿಕ್​ ಸ್ಕೂಟರ್​​ನ ಹೊಸ ದಾಖಲೆ: 2 ದಿನಗಳಲ್ಲಿ 1100 ಕೋಟಿ ರೂ. ಮೊತ್ತದ ಮಾರಾಟ

    ನವದೆಹಲಿ: ಓಲಾ ಎಲೆಕ್ಟ್ರಿಕ್​ ಸ್ಕೂಟರ್​ನ ಆನ್​​ಲೈನ್​ ಖರೀದಿಗಾಗಿ ಒದಗಿಸಿದ್ದ ಮೊದಲ ಅವಕಾಶದಲ್ಲೇ 1,100 ಕೋಟಿ ರೂಪಾಯಿಗೂ ಹೆಚ್ಚು ದಾಖಲೆ ಮೊತ್ತದ ವಾಹನಗಳ ಮಾರಾಟ ನಡೆದಿದೆ ಎಂದು ಓಲಾ ಕಂಪೆನಿ ಸಿಇಒ ಭವಿಶ್​ ಅಗರ್​ವಾಲ್​ ತಿಳಿಸಿದ್ದಾರೆ. ಅಕ್ಟೋಬರ್​ ತಿಂಗಳಲ್ಲಿ ಸುಮಾರು ಒಂದು ಸಾವಿರ ನಗರ ಮತ್ತು ಪಟ್ಟಣಗಳ ಖರೀದಿದಾರರಿಗೆ ಡೆಲಿವರಿ ನೀಡಲಾಗುವುದು ಎಂದಿದ್ದಾರೆ.

    ಓಲಾದ ಎಸ್​1 ಮತ್ತು ಎಸ್​1 ಪ್ರೋ ಸ್ಕೂಟರ್​ಗಳ ಖರೀದಿಗಾಗಿ ಗ್ರಾಹಕರಿಗೆ ಸೆಪ್ಟೆಂಬರ್​ 15 ಮತ್ತು 16 ರಂದು ಒಟ್ಟು 48 ಗಂಟೆಗಳ ಕಾಲ ಪರ್ಚೇಸ್​ ವಿಂಡೋ ತೆರೆಯಲಾಗಿತ್ತು. ಜುಲೈ 2021 ರಲ್ಲಿ ಈ ಸ್ಕೂಟರ್​ಗಾಗಿ ಆನ್​ಲೈನ್​ ರಿಸರ್ವೇಷನ್​ ಮಾಡಿಸಿದ್ದ ಗ್ರಾಹಕರಿಗೆ ಆದ್ಯತೆ ನೀಡಲಾಯಿತು ಎನ್ನಲಾಗಿದೆ.

    ಇದನ್ನೂ ಓದಿ: ಯೂ ಟೂಬ್​ನಿಂದ​ ತಿಂಗಳಿಗೆ 4 ಲಕ್ಷ ರೂಪಾಯಿ ದುಡಿಯುತ್ತಿದ್ದಾರೆ ಕೇಂದ್ರ ಸಚಿವ ನಿತಿನ್​ ಗಡ್ಕರಿ!

    “ಈ ಎರಡು ದಿನಗಳಲ್ಲಿ 1,100 ಕೋಟಿ ರೂ.ಗಳಷ್ಟು ಮಾರಾಟ ನಡೆದಿದೆ. ಇದು ಆಟೋಮೇಟಿವ್​ ಉದ್ಯಮದಲ್ಲಿ ಮೊಟ್ಟಮೊದಲ ಬಾರಿ ನಡೆದಿರುವಂತಹುದು. ಅಷ್ಟೇ ಅಲ್ಲ, ಇದು ಭಾರತೀಯ ಈ-ಕಾಮರ್ಸ್​ ಇತಿಹಾಸದಲ್ಲಿ ಒಂದೇ ಉತ್ಪನ್ನಕ್ಕೆ ಒಂದು ದಿನದಲ್ಲಿ ಮೊತ್ತ ದೃಷ್ಟಿಯಿಂದ ನಡೆದಿರುವ ಅತಿ ಹೆಚ್ಚಿನ ಮಾರಾಟ ವಹಿವಾಟಾಗಿದೆ. ನಾವು ನಿಜವಾದ ಡಿಜಿಟಲ್​ ಇಂಡಿಯಾದಲ್ಲಿ ಬದುಕುತ್ತಿದ್ದೇವೆ” ಎಂದು ಭವಿಶ್​ ಅಗರ್​ವಾಲ್​ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಪರ್ಚೇಸ್​ ವಿಂಡೋ ತೆರೆದಾಗ ಕನಿಷ್ಠ 20,000 ರೂ.ಗಳ ಮೊತ್ತ ಪಾವತಿಸಿ, ಗ್ರಾಹಕರು ಓಲಾ ಸ್ಕೂಟರನ್ನು ಬುಕ್​ ಮಾಡಲು ಅವಕಾಶ ನೀಡಲಾಯಿತು. ಆನ್​ಲೈನ್​ ಸೇಲ್​ನ ಮೊದಲನೇ ದಿನ 600 ಕೋಟಿಗೂ ಹೆಚ್ಚು ಬೆಲೆಯ ಎಲೆಕ್ಟ್ರಿಕ್​ ಸ್ಕೂಟರ್​ಗಳನ್ನು ಮಾರಲಾಯಿತು. ಸದ್ಯಕ್ಕೆ ಪರ್ಚೇಸ್​​ ವಿಂಡೋವನ್ನು ಮುಚ್ಚಲಾಗಿದ್ದು, ಮತ್ತೆ ನವೆಂಬರ್ 1ಕ್ಕೆ ದೀಪಾವಳಿಯ ಸಮಯಕ್ಕೆ ತೆರೆಯಲಾಗುತ್ತದೆ. ಈ ಎರಡು ದಿನಗಳಲ್ಲಿ ಖರೀದಿಸಲಾಗದೇ ಇರುವವರು, ಸದ್ಯಕ್ಕೆ, ಈ ಸ್ಕೂಟರನ್ನು ಕಂಪೆನಿಯ ವೆಬ್​ಸೈಟ್​ olaelectric.comಗೆ ಹೋಗಿ 499 ರೂ. ಪಾವತಿಸಿ ಆನ್​ಲೈನ್​ ಸ್ಲಾಟ್​ಅನ್ನು ಬುಕ್​ ಮಾಡಬಹುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

    ಮಿಸ್ಟರ್​ ಇಂಡಿಯ ಆತ್ಮಹತ್ಯೆ ಯತ್ನ: ನಟ ಸಾಹಿಲ್​ ಖಾನ್​ಗೆ ಸಂಕಷ್ಟ

    ಆನ್​ಲೈನ್​ ಜೂಜು, ಬಾಜಿಗೆ ಬ್ರೇಕ್​: ವಿಧಾನಸಭೆಯಲ್ಲಿ ವಿಧೇಯಕ ಮಂಡನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts