ಆನ್​ಲೈನ್​ ಜೂಜು, ಬಾಜಿಗೆ ಬ್ರೇಕ್​: ವಿಧಾನಸಭೆಯಲ್ಲಿ ವಿಧೇಯಕ ಮಂಡನೆ

onlinegambling
Published on

ಬೆಂಗಳೂರು: ಆನ್​ಲೈನ್​ ಜೂಜಾಟ ಮತ್ತು ಬೆಟ್ಟಿಂಗ್​ ಮೇಲೆ ನಿಷೇಧ ಹೇರಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ 1963 ರ ಕರ್ನಾಟಕ ಪೊಲೀಸ್​ ಅಧಿನಿಯಮಕ್ಕೆ ಸೂಕ್ತ ಬದಲಾವಣೆ ತರಲು ತಿದ್ದುಪಡಿ ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ಸೋಮವಾರ ಅಥವಾ ಮಂಗಳವಾರ ಸದನದಲ್ಲಿ ಚರ್ಚೆಯಾಗಲಿರುವ ಈ ಕರ್ನಾಟಕ ಪೊಲೀಸ್​ (ತಿದ್ದುಪಡಿ) ವಿಧೇಯಕ, 2021ರಲ್ಲಿ ಕಂಪ್ಯೂಟರ್​ ಅಥವಾ ಮೊಬೈಲ್​ ಆ್ಯಪ್​ಗಳನ್ನು ಬಳಸಿ ತೊಡಗಿಕೊಳ್ಳುವ ಆನ್​​ಲೈನ್ ಜೂಜು ಅಥವಾ ಬಾಜಿ ಕಟ್ಟುವಿಕೆಯನ್ನು ನಿಷೇಧಿಸುವ ಪ್ರಸ್ತಾವನೆ ಇದೆ. ಆನ್​​ಲೈನ್ ಗ್ಯಾಂಬ್ಲಿಂಗ್​ ಅಥವಾ ಬೆಟ್ಟಿಂಗ್ ಮಾಡಿದವರಿಗೆ ಒಂದು ವರ್ಷದಿಂದ ಮೂರು ವರ್ಷದ ತನಕ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಳವರೆಗೆ ದಂಡ ವಿಧಿಸುವ ಪ್ರಸ್ತಾಪವಿದೆ.

ಜೊತೆಗೆ, ಈ ರೀತಿ ಜೂಜಾಡುವವರಿಗೆ ಅಥವಾ ಜೂಜಾಟ ನಡೆಸುವವರಿಗೆ ಸ್ಥಳ ನೀಡುವ ವ್ಯಕ್ತಿಗಳಿಗೆ ಒಂದು ವರ್ಷದ ಜೈಲು ಶಿಕ್ಷೆ ಹಾಗೂ ಇತರ ರೀತಿಯಲ್ಲಿ ಸಹಾಯ ಮಾಡಿದವರಿಗೆ ಅಥವಾ ಸಾಲ ನೀಡಿದವರಿಗೆ 6 ತಿಂಗಳ ತನಕ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸುವ ಉಲ್ಲೇಖವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net