ಸೆ.1ಕ್ಕೆ ಗಾಯನ ಸ್ಪರ್ಧೆ, ಪ್ರತಿಭಾ ಪುರಸ್ಕಾರ

shanta
ಸುದ್ದಿಗೋಷ್ಠಿಯಲ್ಲಿ ಶಾಂತಾ ಸುರೇಂದ್ರ ಮಾತನಾಡಿದರು. ಪ್ರತಿಮಾ ಡಾಕಪ್ಪ, ಸವಿತಾ ಜೀವನ್, ಗಾಯತ್ರಿ ಯಲ್ಲಪ್ಪ ಗೌಡ, ವಿನೋದಾ, ಮಮತಾ ಶಿವಣ್ಣ ಮುಂತಾದವರಿದ್ದರು.
Published on

ಶಿವಮೊಗ್ಗ: ಒಕ್ಕಲಿಗರ ಸಂಘದ ಜಿಲ್ಲಾ ಮಹಿಳಾ ಘಟಕದಿಂದ ಸೆ.1ರಂದು ಮಧ್ಯಾಹ್ನ 2.30ಕ್ಕೆ ಶ್ರಾವಣ ಮಾಸದ ಕುರಿತು ಗಾಯನ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷೆ ಪ್ರತಿಮಾ ಡಾಕಪ್ಪ ಗೌಡ ತಿಳಿಸಿದರು.

ಗಾಯನ ಸ್ಪರ್ಧೆಯಲ್ಲಿ ಪ್ರತಿ ತಂಡದಲ್ಲಿ ಕನಿಷ್ಠ ಐವರಿರಬೇಕು. ವಿಜೇತ ಮೂರು ತಂಡಗಳಿಗೆ ಕ್ರಮವಾಗಿ 2 ಸಾವಿರ, 1,500 ಹಾಗೂ ಒಂದು ಸಾವಿರ ರೂ. ನೀಡಲಾಗುವುದು. ಆಸಕ್ತರು (ಮೊ.9845948118) ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ಶಾಂತಾ ಸುರೇಂದ್ರ ಮಾತನಾಡಿ, ಹಲವು ಸಂಘ ಸಂಸ್ಥೆಗಳಿಗೆ ಇತ್ತೀಚೆಗೆ ಆಯ್ಕೆಯಾದವರನ್ನು ಸೆ.1ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು ಎಂದರು.
ಮಹಿಳಾ ಘಟಕದ ಪದಾಧಿಕಾರಿಗಳಾದ ವಿನೋದಾ ಹುಚ್ಚಪ್ಪ, ಸವಿತಾ ಜೀವನ್, ಪದ್ಮಾ ಯೋಗೇಂದ್ರ, ಗಾಯತ್ರಿ ಯಲ್ಲಪ್ಪ ಗೌಡ, ಮಮತಾ ಶಿವಣ್ಣ, ಪುಷ್ಪಲತಾ ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net