ಹಿರಿಯ ಗಾಯಕಿ ಉಮಾ ರಮಣನ್​ ನಿಧನ

Uma Ramanan
Published on

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್​ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ 72 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

ಉಮಾ ಅವರು ಪತಿ ಎ.ವಿ. ರಮಣನ್​ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಆದರೆ, ಅವರ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಉಮಾ ಅವರ ನಿಧನಕ್ಕೆ ಚಿತ್ರಂಗ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ಸಂಯೋಜಿಸಿರುವ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿ ಉಮಾ ಹೆಚ್ಚು ಖ್ಯಾತಿ ಪಡೆದಿದ್ದಾರೆ. ವಿದ್ಯಾ ಸಾಗರ್, ಮಣಿ ಶರ್ಮಾ ಹಾಗೂ ದೇವ ಅವರು ಕಂಪೋಸ್ ಮಾಡಿದ ಹಾಡುಗಳನ್ನು ಕೂಡ ಹಾಡಿದ್ದಾರೆ. ಕಳೆದ 35 ವರ್ಷಗಳ ಅವಧಿಯಲ್ಲಿ 6000ಕ್ಕೂ ಅಧಿಕ ಕಾನಸರ್ಟ್​ಗಳಲ್ಲಿ ಹಾಡುವ ಮೂಲಕ ಉಮಾ ಅವರು ಪ್ರಖ್ಯಾತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net