ಪೊಲೀಸ್ ಭದ್ರತೆ ಹಿಂಪಡೆದ ಮರುದಿನವೇ ಕೊಲೆ; ಖ್ಯಾತ ಗಾಯಕ, ಕಾಂಗ್ರೆಸ್​ ನಾಯಕನನ್ನು ಗುಂಡಿಟ್ಟು ಕೊಂದರು!

Sidhu
Published on

ನವದೆಹಲಿ: ನಿನ್ನೆಯವರೆಗೂ ಪೊಲೀಸ್ ಭದ್ರತೆಯಲ್ಲಿದ್ದ ಖ್ಯಾತ ಗಾಯಕ ಹಾಗೂ ಕಾಂಗ್ರೆಸ್ ನಾಯಕರೂ ಆಗಿದ್ದ ವ್ಯಕ್ತಿ ಇಂದು ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿಯಿಂದ ಕೊಲೆಯಾಗಿ ಹೋಗಿದ್ದಾರೆ.

ಪಂಜಾಬಿ ಗಾಯಕ ಸಿದ್ಧು ಮೂಸೆ ವಾಲಾ (28) ಕೊಲೆಯಾದ ವ್ಯಕ್ತಿ. ಇವರನ್ನು ಅಪರಿಚಿತ ದುಷ್ಕರ್ಮಿಗಳು ಇಂದು ಪಂಜಾಬ್​ನ ಮನ್ಸಾ ಜಿಲ್ಲೆಯ ಜವಹರ್ಕೆ ಗ್ರಾಮದಲ್ಲಿ ಗುಂಡಿಟ್ಟು ಕೊಂದಿದ್ದಾರೆ. 424 ಜನರಿಗೆ ನೀಡಿದ್ದ ಭದ್ರತೆಯನ್ನು ಪಂಜಾಬ್ ಪೊಲೀಸರು ನಿನ್ನೆಯಷ್ಟೇ ಹಿಂಪಡೆದಿದ್ದರು. ಆ ಪೈಕಿ ಸಿದ್ಧು ಕೂಡ ಒಬ್ಬರಾಗಿದ್ದು, ಭದ್ರತೆ ಹಿಂಪಡೆದ ಮರುದಿನವೇ ಹತ್ಯೆಗೀಡಾಗಿದ್ದು ಅಚ್ಚರಿ ಮೂಡಿಸಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಪ್​ ಅಭ್ಯರ್ಥಿ ವಿಜಯ್​ ಸಿಂಗ್ಲಾ ವಿರುದ್ಧ ಸ್ಪರ್ಧಿಸಿದ್ದ ಸಿದ್ಧು 63 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇತ್ತೀಚೆಗೆ ತಮ್ಮ ಸ್ಕೇಪ್​ಗೋಟ್ ಎಂಬ ಗೀತೆಯಲ್ಲಿ ಆಪ್​ ಬೆಂಬಲಿಗರನ್ನು ಗದ್ದರ್ ಎಂದು ಟೀಕಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net