‘ಸಿಂಗ್ ಗೀತಂ’ ಶ್ರೀನಿವಾಸ ರಾವ್ : 94ರ ವರ್ಷದ ಹಿರಿಯ ನಿರ್ದೇಶಕನ ಸೃಜನಶೀಲತೆಗೆ ತಲೆದೂಗಿದ ತೆಲುಗು ಚಿತ್ರರಂಗ

singeetham srinivasa rao
singeetham srinivasa rao
Published on

ಪ್ರಮುಖ ಮುಖ್ಯಾಂಶಗಳು

  • 94ರ ಇಳಿವಯಸ್ಸಿನಲ್ಲಿ ಡೈರೆಕ್ಟರ್ ಕ್ಯಾಪ್ ಧರಿಸಿದ ಶ್ರೀನಿವಾಸ ರಾವ್​
  • ಕನ್ನಡದ ಡಾ.ರಾಜ್, ಶಿವರಾಜಕುಮಾರ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಖ್ಯಾತಿಯ ನಿರ್ದೇಶಕ
  • ತಮ್ಮ ಹೆಸರನ್ನೇ ಟೈಟಲ್ ಮಾಡಿದ ಹಿರಿಯ ನಿರ್ದೇಶಕ
ಕನ್ನಡದ ‘ಹಾಲು ಜೇನು’, ‘ದೇವತಾ ಮನುಷ್ಯ’, ಮೂಕಿ ಸಿನಿಮಾ ‘ಪುಷ್ಪಕ ವಿಮಾನ’ ಸೇರಿ 60ಕ್ಕೂ ಅಧಿಕ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಖ್ಯಾತಿ ಸಿಂಗೀತಂ ಶ್ರೀನಿವಾಸ ರಾವ್ ಅವರಿಗೆ ಸಲ್ಲುತ್ತದೆ. ಅವರಿಗೆ ಈಗ 94 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲೂ ಅವರು 19ರ ಉತ್ಸಾಹಿಯಂತೆ ಸಿನಿಮಾ ನಿರ್ದೇಶನಕ್ಕಿಳಿದಿರುವುದು ಗೊತ್ತೇ ಇದೆ. ತೆಲುಗಿನ ‘ವೆಲ್‌ಕಂ ಒಬಾಮಾ’ ತೆರೆಕಂಡು 13 ವರ್ಷಗಳ ಬಳಿಕ ಮತ್ತೆ ಶ್ರೀನಿವಾಸ ರಾವ್ ಡೈರೆಕ್ಟರ್ ಕ್ಯಾಪ್ ಧರಿಸಿ, ಕಳೆದ ಫೆಬ್ರವರಿಯಲ್ಲಿ ಹೊಸ ಸಿನಿಮಾ ಘೋಷಿಸಿದ್ದರು. ಆದರೆ, ಚಿತ್ರದ ಟೈಟಲ್ ಮಾತ್ರ ರಿವೀಲ್ ಮಾಡಿರಲಿಲ್ಲ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರದ ಶೀರ್ಷಿಕೆ ಇದೀಗ ಘೋಷಣೆಯಾಗಿದ್ದು, ‘ಸಿಂಗ್ ಗೀತಂ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ನಿರ್ದೇಶಕರ ಹೆಸರನ್ನೇ ಆಕರ್ಷಣೀಯವಾಗಿ ಟೈಟಲ್ ಮಾಡಿರುವುದು ವಿಶೇಷತೆ. ಇತ್ತೀಚೆಗೆ ಟೀಸರ್ ಕೂಡ ರಿಲೀಸ್ ಮಾಡಲಾಗಿದ್ದು, ಗಣಿ ಪ್ರದೇಶದ ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದೆ. ಜನರು ಚಿನ್ನದ ಹುಡುಕಾಟದಲ್ಲಿರುವಾಗ ಆ ಹಳ್ಳಿಗೆ ಯುವಕನೊಬ್ಬನ ಪ್ರವೇಶವಾಗುತ್ತದೆ. ಆಗ ನಡೆಯುವ ಸಂಘರ್ಷಗಳನ್ನೇ ಟೀಸರ್‌ನಲ್ಲಿ ಸಂಕ್ಷಿಪ್ತವಾಗಿ ತೋರಿಸಲಾಗಿದೆ. ಕೇವಲ ನಾಲ್ಕೇ ತಿಂಗಳಲ್ಲಿ ಇಡೀ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ತಮ್ಮ ಸಂಧ್ಯಾಕಾಲದಲ್ಲೂ ಸಿಂಗೀತಂ ಶ್ರೀನಿವಾಸ ರಾವ್ ತೋರಿರುವ ಸೃಜನಶೀಲ ಪ್ರಯತ್ನಕ್ಕೆ ಇಡೀ ಟಾಲಿವುಡ್ ತಲೆದೂಗಿದೆ. ಇದೊಂದು ಮ್ಯೂಸಿಕಲ್ ್ಯಾಂಟಸಿ ಚಿತ್ರವಾಗಿರಲಿದ್ದು, ನವ ಪ್ರತಿಭೆಗಳಾದ ಆಯಾನ್, ಅಹಲ್ಯಾ ಬಾಮ್ರೂ, ಶಾಲಿನಿ ಕಲಾಬಳಗದಲ್ಲಿದ್ದಾರೆ. ಇದೇ ಜೂನ್ 11ರಂದು ‘ಸಿಂಗ್ ಗೀತಂ’ ಚಿತ್ರ ತೆರೆಗೆ ಬರಲಿದೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net