ಕೇಂದ್ರ ಬಜೆಟ್​ 2020: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ, 2014-19ರ ಅವಧಿಯಲ್ಲಿ 284 ಬಿಲಿಯನ್ ಡಾಲರ್​ಗೆ ಏರಿಕೆ

FDI 1 Feb 20
Published on

ನವದೆಹಲಿ: 2014-19ರ ಅವಧಿಯಲ್ಲಿ ಭಾರತಕ್ಕೆ ಹರಿದು ಬರುತ್ತಿರುವ ವಿದೇಶಿ ನೇರ ಬಂಡವಾಳ ಹೂಡಿಕೆ 284 ಬಿಲಿಯನ್​ ಯುಎಸ್​ ಡಾಲರ್​ಗೆ ಏರಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ವೇಳೆ ಹೇಳಿದರು.

2009-14ರ ಅವಧಿಯಲ್ಲಿ ದೇಶದ ವಿದೇಶಿ ನೇರ ಬಂಡವಾಳ ಹೂಡಿಕೆ 190 ಬಿಲಿಯನ್​ ಯುಎಸ್​ಡಿ ಇತ್ತು. ಅದು 2014-19ರ ಅವಧಿಯಲ್ಲಿ 284 ಬಿಲಿಯನ್​ ಯುಎಸ್​ ಡಾಲರ್​ಗೆ ಏರಿದೆ. ಪ್ರಸಕ್ತ ಹಣಕಾಸುವ ವರ್ಷದ ಮೊದಲಾರ್ಧ ಭಾಗದಲ್ಲಿ ಶೇ.15ರಷ್ಟು ಹೆಚ್ಚಾಗಿ 26 ಬಿಲಿಯನ್​ ಡಾಲರ್​ಗೆ ತಲುಪಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಕಂಪ್ಯೂಟರ್​ ಸಾಫ್ಟ್​ವೇರ್, ಹಾರ್ಡ್​ವೇರ್​, ದೂರಸಂಪರ್ಕ ಸೇವೆಗಳು, ಅಟೋಮೊಬೈಲ್ಸ್​ ಮತ್ತು ವ್ಯಾಪಾರೋದ್ಯಮ ವಲಯಗಳೂ ಹೆಚ್ಚಾಗಿ ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಸಿಂಗಪೂರ್ ಅತಿ ಹೆಚ್ಚು ಅಂದರೆ 8 ಬಿಲಿಯನ್​ ಯುಎಸ್​ ಡಾಲರ್​​ಗಳನ್ನು ಹೂಡಕೆ ಮಾಡಿದೆ. ಮಾರಿಷಸ್​, ಯುಎಸ್, ನೆದರ್​ಲ್ಯಾಂಡ್​ ಮತ್ತು ಜಪಾನ್​ ದೇಶಗಳೂ ನೇರ ಬಂಡವಾಳ ಹೂಡಿಕೆ ಮಾಡಿವೆ ಎಂದು ಮಾಹಿತಿ ನೀಡಿದರು. (ಪಿಟಿಐ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net