ಏಳು ನಿಮಿಷದಲ್ಲಿ 56 ಶ್ಲೋಕ; ಬಾಲಕಿ ಪುಣ್ಯಶ್ರಿತಾ ಚಿಲಕೂರಿಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ

27102020 Sindhanoor Punyashrita Chilakuri
Published on

ಸಿಂಧನೂರು ತಾಲೂಕಿನ ಕೀರ್ತಿ ಹೆಚ್ಚಿಸಿದ 10 ವರ್ಷದ ಬಾಲಕಿ

ಸಿಂಧನೂರು: ತಾಲೂಕಿನ ಗುಂಜಳ್ಳಿಕ್ಯಾಂಪಿನ ಹತ್ತು ವರ್ಷದ ಬಾಲಕಿ ಪುಣ್ಯಶ್ರಿತಾ ಚಿಲಕೂರಿ ಕರ್ನಾಟಕ ಅಚಿವರ್ಸ್‌ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಸಂಪಾದಿಸಿ, ತಾಲೂಕಿಗೆ ಕೀರ್ತಿ ತಂದಿದ್ದಾಳೆ.

ಸ್ಥಳೀಯ ಎಂಡಿಎನ್ ಪ್ಯೂಚರ್ ಶಾಲೆಯ ವಿದ್ಯಾರ್ಥಿನಿಯಾದ ಪುಣ್ಯಶ್ರಿತಾ ಚಿಲಕೂರಿ ಬಸವಣ್ಣನವರ ವಚನಗಳ ವಿಶ್ಲೇಷಣೆ, ಭಗವದ್ಗೀತೆ, ರಾಮಾಯಣ ಪಟಪಟನೆ ಹೇಳುತ್ತಾಳೆ. ಈಕೆಯ ನೆನಪಿನ ಶಕ್ತಿಗೆ ಎಲ್ಲರೂ ಬೆರಗಾಗುತ್ತಾರೆ. ಐವತ್ತಾರು ಶ್ಲೋಕಗಳನ್ನು ಏಳು ನಿಮಿಷದಲ್ಲಿ ಹೇಳುತ್ತಾಳೆ. ಭರತ ನಾಟ್ಯ, ಹಿಂದುಸ್ತಾನಿ ಸಂಗೀತ, ವೆಸ್ಟರ್ನ್ ಡ್ಯಾನ್ಸ್, ಭಾಷಣ, ಸಾಮಾನ್ಯ ಜ್ಞಾನ, ಭಗವವದ್ಗೀತೆ, ಸಣ್ಣ ಕಥೆಗಳು, ಸಂಸ್ಕೃತ ಶ್ಲೋಕಗಳನ್ನು ಹೇಳುವ ಜಾಣ್ಮೆ ಇರುವ ಈ ಬಾಲ ಪ್ರತಿಭೆಯನ್ನು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದೆ.

ಮಗಳು ಕರ್ನಾಟಕ ಬುಕ್ ಆಪ್ ರೆಕಾರ್ಡ್ಸ್ ಸೇರಿ ನಮ್ಮ ಹೆಸರನ್ನು ಕರ್ನಾಟಕದ ಜನರಿಗೆ ಪರಿಚಯಿಸಿದ್ದಾಳೆ. ನಮ್ಮ ಮಗಳೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಅವಳಲ್ಲಿ ಅಪಾರ ಬುದ್ಧಿ ಸಾಮರ್ಥ್ಯ ಇದೆ. ಐಎಎಸ್ ಮಾಡುವ ಗುರಿ ಹೊಂದಿರುವ ಅವಳಿಗೆ ತಾಯಿಯ ಮಾರ್ಗದರ್ಶನ ಅವಳಿಗೆ ಪೂರಕವಾಗಿದೆ ಎಂದು ಪುಣ್ಯಶ್ರಿತಾ ತಂದೆ ಸಿ.ಎಚ್.ರಾಮು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net