ಸೌಲಭ್ಯ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ

20sor4
ಸೊರಬದಲ್ಲಿ ಏರ್ಪಡಿಸಿದ್ದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ನಾಗರಾಜಗೌಡ ಚಿಕ್ಕಾವಲಿ ಉದ್ಘಾಟಿಸಿದರು. ಕೆ.ಎಸ್.ನಂದೀಶ್, ಟಿ.ನಾಗಪ್ಪ, ಎಚ್.ಮಲ್ಲಿಕಾರ್ಜುನ ಗೌಡ ಇತರರಿದ್ದರು.
Published on

ಸೊರಬ: ಸಹಕಾರ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಷೇರುದಾರರು ಪ್ರಮುಖರಾಗಿದ್ದು, ಪ್ರತಿಯೊಬ್ಬರು ಸಕಾಲಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ ಸಂಘದ ಪ್ರಗತಿಗೆ ಶ್ರಮಿಸಬೇಕು ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ನಾಗರಾಜಗೌಡ ಚಿಕ್ಕಾವಲಿ ಹೇಳಿದರು.

ಸೊರಬದ ಗಿರಿಜಾಶಂಕರ ಸಭಾಭವನದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬ್ಯಾಂಕ್‌ನ ಷೇರುದಾರರಿಗೆ ಪ್ರಾಮಾಣಿಕವಾಗಿ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.

ಬ್ಯಾಂಕ್‌ನಲ್ಲಿ 5,776 ಷೇರುದಾರಾರಿದ್ದು, 122.6 ಲಕ್ಷ ರೂ. ಷೇರು ಸಂಗ್ರಹವಾಗಿದೆ. ರಾಜ್ಯಸರ್ಕಾರದ ಷೇರು ಬಂಡವಾಳ 7.50 ಲಕ್ಷ ರೂ. ಇರುತ್ತದೆ. ಒಟ್ಟು ಠೇವಣಿ 98.02 ಲಕ್ಷ ರೂ. ಆಗಿದ್ದು, 66.27 ಲಕ್ಷ ರೂ. ಲಾಭ ಗಳಿಸಿದೆ ಎಂದರು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಷೇರುದಾರ ಹಾಗೂ ನಿದೇರ್ಶಕರ ಮಕ್ಕಳನ್ನು ಗೌರವಿಸಿ ಚೆಕ್ ನೀಡಲಾಯಿತು.

ಉಪಾಧ್ಯಕ್ಷ ಕೆ.ಎಸ್.ನಂದೀಶ್, ನಿರ್ದೇಶಕರಾದ ಟಿ.ನಾಗಪ್ಪ, ಎಚ್.ಮಲ್ಲಿಕಾರ್ಜುನ ಗೌಡ, ಕೃಷ್ಣಮೂರ್ತಿ, ಶಿವಕುಮಾರ ಗೌಡ, ವೀರೇಂದ್ರ ಕುಮಾರ, ಸಿ.ವಿಜೇಂದ್ರಕುಮಾರ, ಜೈಕುಮಾರ್ ಕನ್ನಪ್ಪ ಎಲ್ಲಕಂದ್ಲಿ, ಗೌರಮ್ಮ, ಸುಮಿತ್ರಾಬಾಯಿ, ನಿಂಗಪ್ಪ, ಶಾರದಾ ಹಳೇಸೊರಬ, ನಿಂಗಪ್ಪ, ವ್ಯವಸ್ಥಪಕ ಸತೀಶ್ ಭಂಡಾರಿ, ಸಿಬ್ಬಂದಿ ಮಂಜುನಾಥ ಸ್ವಾಮಿ, ಡಿ.ಟಿ.ಸುಬ್ರಹ್ಮಣ್ಯ ಗಣಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net