ಅಂದಾಜು 2 ಶತಮಾನಗಳಿಂದಲೂ ಗಾಲ್ವಾನ್​ನಲ್ಲಿ ಭಾರತದ್ದೇ ಆಡಳಿತ

amin galwan
Published on

ನವದೆಹಲಿ: ಗಾಲ್ವಾನ್​ ಕಣಿವೆ ಕಲೆದ 2 ಶತಮಾನಗಳಿಂದಲೂ ಭಾರತದ ಆಡಳಿತಕ್ಕೆ ಒಳಪಟ್ಟಿದೆ ಎಂದು ಈ ಪ್ರದೇಶಕ್ಕೆ ಹೆಸರು ಗಾಲ್ವಾನ್​ ಎಂಬ ಹೆಸರು ಬರಲು ಕಾರಣರಾದ ಗುಲಾಂ ರಸೂಲ್​ ಗಾಲ್ವಾನ್​ ಅವರ ಮೊಮ್ಮದ ಅಮೀನ್​ ಗಾಲ್ವಾನ್​ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗಾಲ್ವಾನ ಕಣಿವೆಯಲ್ಲಿ ಹಲವು ಘಟನೆಗಳು ಸಂಭವಿಸುತ್ತಿವೆ. ಆದರೆ, ಈ ಪ್ರದೇಶ 200 ವರ್ಷಗಳಿಂದಲೂ ಭಾರತದ ಆಡಳಿತಕ್ಕೆ ಒಳಪಟ್ಟಿದ್ದಾಗಿದೆ. ಈ ಬಗೆಗಿನ ವಿವಾದವನ್ನು ಪರಿಹರಿಸಿಕೊಳ್ಳಲು ಯುದ್ಧ ಒಂದೇ ಪರಿಹಾರವಲ್ಲ. ಮಾತುಕತೆಯ ಮೂಲಕ ಇದನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಗಾಲ್ವಾನ್​ನಲ್ಲಿನ ಜನತೆ ಸದಾ ಭಾರತೀಯ ಸೇನೆಯನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಮುಂದೆಯೂ ಕೂಡ ಭಾರತೀಯ ಸೇನೆಗೇ ಬೆಂಬಲ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಬೆಳವಣಿಗೆಯಿಂದ ಇಲ್ಲಿನ ಜನ ಸ್ವಲ್ಪ ಹೆದರಿಕೊಂಡಿದ್ದಾರೆ. ಆದರೆ, ಇದರ ಅವಶ್ಯಕತೆ ಇಲ್ಲ. ಲಡಾಖ್​ನ ಜನರು ಸದಾ ನಮ್ಮ ಸೇನಾಪಡೆಯನ್ನು ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧದ ಸಮರದಲ್ಲೂ ಅವರು ಹೀಗೆಯೇ ನಡೆದುಕೊಂಡಿದ್ದರು. ಹಾಗಾಗಿ ಈಗಲೂ ಕೂಡ ಅವರೆಲ್ಲರೂ ಭಾರತೀಯ ಸೇನಾಪಡೆಯನ್ನು ಬೆಂಬಲಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.

ಗಾಲ್ವಾನ್​ ಕಣಿವೆ ಪ್ರದೇಶ ಭಾರತಕ್ಕೆ ಸೇರಿದ್ದರೂ, ಆಯಕಟ್ಟಿನ ಸ್ಥಳದಲ್ಲಿದೆ ಎಂಬ ಕಾರಣಕ್ಕಾಗಿ ಚೀನಾ ಈ ಪ್ರದೇಶದ ಮೇಲೆ ಕಣ್ಣಿಟ್ಟಿದೆ. ಅಲ್ಲದೆ, ಈ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡು, ಭಾರತದ ವಿರುದ್ಧ ಕತ್ತಿಮಸೆಯುತ್ತಿದೆ. ಕಳೆದ ಸೋಮವಾರ ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ಏರ್ಪಟ್ಟು ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾದ ಯೋಧರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಸತ್ತಿರುವ ಮಾಹಿತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net