

ಹೊಸ ಹೊಸ ಪರ್ಫ್ಯೂಮ್ ಕೊಂಡುಕೊಂಡು ಅದನ್ನು ಬಳಸಲು ಕಾತುರದಿಂದ ಕಾಯುತ್ತಿರುತ್ತೇವೆ. ಅಲ್ಲದೆ ದೇಹದಲ್ಲಿನ ಬೆವರಿನ ವಾಸನೆಯನ್ನು ತಪ್ಪಿಸಲು ಸುಗಂಧ ದ್ರವ್ಯ ಬಳಸುತ್ತೇವೆ. ಆದರೆ ಅದು 2 ಗಂಟೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಮಂಕಾಗುತ್ತದೆ. ಬಳಸುವ ಪರ್ಫ್ಯೂಮ್ ಹೆಚ್ಚು ಕಾಲ ಉಳಿಯಬೇಕೇ.. ಅದನ್ನು ಹೇಗೆ ಬಳಸಿದರೆ ದೀರ್ಘಕಾಲ ಉಳಿಯುತ್ತದೆ. ಬಳಸುವ ವಿಧಾನವು ಅದು ಎಷ್ಟು ಕಾಲ ಉಳಿಯುತ್ತದೆ ಎಂಬುದರ ಮೇಲೆ ಅವಲಂಭಿತವಾಗಿರುತ್ತದೆ. ಪರ್ಫ್ಯೂಮ್ ಹೆಚ್ಚು ಕಾಲ ಉಳಿಯುವಂತೆ ಬಳಸುವುದು ಹೇಗೆ ಎಂಬ ಟಿಪ್ಸ್ ಇಲ್ಲಿ ನೀಡಲಾಗಿದೆ.