ಸರಳ ಜೀವನವೇ ಸಮಾಜಕ್ಕೆ ಸಂದೇಶ : ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅಭಿಮತ ಸಾಮಾಜಿಕ ಹೋರಾಟ ಆರಂಭಿಸಿದ್ದೇ ಮಹಾತ್ಮ

02-10-rama-dc
Published on

 ರಾಮನಗರ : ಮಹಾತ್ಮ ಗಾಂಧೀಜಿ ಅವರು ಪಾಲಿಸುತ್ತಿದ್ದ ಸತ್ಯ, ಅಹಿಂಸೆ ಮಾರ್ಗ ಹಾಗೂ ಸರಳ ಜೀವನವೇ ಸಮಾಜಕ್ಕೆ ಸಂದೇಶ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು. 1922ರಲ್ಲಿ ಅಸಹಕಾರ ಚಳವಳಿ ನಡೆಯುತ್ತಿರುವ ಸಂದರ್ಭದಲ್ಲಿ ಗೋರಖ್‌ಪುರದಲ್ಲಿ ನಡೆದ ಚೌರಾಚೌರಿ ಘಟನೆಯಲ್ಲಿ 20 ಪೊಲೀಸರು ಠಾಣೆಯಲ್ಲೇ ಸಜೀವ ದಹನವಾದರು. ಇದೇ ಹೋರಾಟ ಮುಂದುವರಿದಿದ್ದರೆ ಹಿಂಸಾ ಮಾರ್ಗದ ಮೂಲಕ ಬೇಗನೇ ಸ್ವಾತಂತ್ರ್ಯ ದೊರಕುತ್ತಿತ್ತು. ಇದನ್ನು ವಿರೋಧಿಸಿದ ಗಾಂಧೀಜಿ ಚಳವಳಿಯ ಹೊಣೆ ಹೊತ್ತು ಐದು ದಿನ ಉಪವಾಸ ಮಾಡಿದರು. ಇದು ಬ್ರಿಟಿಷ್ ಸರ್ಕಾರಕ್ಕೆ ಅಚ್ಚರಿ ಮೂಡಿಸಿತು. ಶಾಂತಿ ಮತ್ತು ಅಹಿಂಸೆ ಸ್ವಾತಂತ್ರ್ಯ ಹೋರಾಟದ ಅಸ ಎಂದರು.

ವಿಶ್ವದಲ್ಲಿ ಸಾಮಾಜಿಕ ಹೋರಾಟಗಳು ಪ್ರಥಮವಾಗಿ ಆರಂಭ ಮಾಡಿದ್ದೇ ಮಹಾತ್ಮ ಗಾಂಧಿ. ನಾವು ಇಂದು ಅಳವಡಿಸಿಕೊಂಡಿರುವ ಗ್ರಾಮೀಣಾಭಿವದ್ಧಿ, ಮಹಿಳಾ ಸಬಲೀಕರಣ, ತ್ಯಾಜ್ಯ ವಸ್ತುಗಳ ನಿರ್ವಹಣೆ ಗಾಂಧೀಜಿ ಅವರ ಚಿಂತನೆಗಳಿಗೆ ಹಿಡಿದ ಕನ್ನಡಿ ಎಂದರು.

ಎಡಿಸಿ ಟಿ. ಜವರೇಗೌಡ ಮಾತನಾಡಿ, ದಕ್ಷಿಣ ಆಫ್ರಿಕಾದಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಅವರನ್ನು ಕಪ್ಪುವರ್ಣೀಯ ಎಂದು ಬೋಗಿಯಿಂದ ಹೊರದಬ್ಬಲಾಗುತ್ತದೆ. ಗಾಂಧೀಜಿ ಅವರು ನ್ಯಾಷನಲ್ ಇಂಡಿಯನ್ ಕಾಂಗ್ರೆಸ್ ಸ್ಥಾಪಿಸಿ ರೂಪುರೇಷೆಗಳನ್ನು ಸಿದ್ಧಪಡಿಸಿ ವರ್ಣ ಹಾಗೂ ಜನಾಂಗೀಯ ದ್ವೇಷದ ವಿರುದ್ಧ ಹೋರಾಟ ನಡೆಸಿ ಯಶಸ್ವಿಯಾದರು ಎಂದರು.

ಗಾಂಧೀಜಿ ಅವರು ಭಾರತಕ್ಕೆ ಬಂದ ನಂತರ ವಕೀಲ ವತ್ತಿ ಮಾಡದೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಅಪಾರವಾಗಿ ಶ್ರಮಿಸಿದರು. ಸತ್ಯಾಗ್ರಹ ಮತ್ತ ಅಹಿಂಸೆ ಅವರ ಮೂಲಮಂತ್ರವಾಗಿತ್ತು. ಜನಸಾಮಾನ್ಯರನ್ನು ಒಗ್ಗೂಡಿಸಿಕೊಂಡು ಸತ್ಯಾಗ್ರಹ ಮತ್ತ ಅಹಿಂಸೆಯ ಮೂಲಕ ಬ್ರಿಟಿಷ್ ಆಳ್ವಿಕೆಗೆ ಅಸಹಕಾರ ನೀಡಿ ಹೋರಾಟ ನಡೆಸಿದರು ಎಂದರು.

ಜಿಲ್ಲಾ ಆರೋಗ್ಯಾಕಾರಿ ಡಾ.ನಿರಂಜನ್, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ್, ರೇಷ್ಮೆ ಇಲಾಖೆ ಉಪನಿರ್ದೇಶಕ ಬಸವರಾಜು, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿ.ಆರ್ ನವೀನ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net