

ನವದೆಹಲಿ: ದುರ್ಬಲಗೊಂಡ ಅಮೆರಿಕನ್ ಡಾಲರ್, ಕೊನೆಗೊಳ್ಳದ ತೆರಿಗೆ ಅನಿಶ್ಚಿತತೆ ಮುಂತಾದ ಕಾರಣಗಳಿಂದಾಗಿ ಹೂಡಿಕೆದಾರರು ಸುರಕ್ಷಿತ ಆಸ್ತಿಗಳತ್ತ ಒಲವು ತೋರಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಬೆಳ್ಳಿ ಬೆಲೆ 5,000 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 1,15,000 ರೂ. ಆಗಿದೆ. ಇದು ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿದೆ. ಇದಕ್ಕೆ ಮುನ್ನ ಶನಿವಾರ ಬೆಳ್ಳಿ 4,500 ರೂ. ಏರಿಕೆಯಾಗಿ 1,10,000 ರೂ. ಜೀವಮಾನದ ಗರಿಷ್ಠ ಮಟ್ಟ ತಲುಪಿತ್ತು.
ಈ ಮಧ್ಯೆ, ಚಿನ್ನದ ಬೆಲೆ ಸೋಮವಾರ 200 ರೂ. ಏರಿಕೆಯಾಗಿದೆ. ಶೇ. 99.9 ಶುದ್ಧತೆಯ ಚಿನ್ನ 10 ಗ್ರಾಂಗೆ 99,570 ರೂ. ಆಗಿದ್ದು, ಶೇ. 99.5 ಶುದ್ಧತೆಯ ಚಿನ್ನ 99,000 ರೂ.ಗೆ ತಲುಪಿದೆ.