

ನವದೆಹಲಿ: ಚಿನ್ನ ಮತ್ತು ಬೆಳ್ಳಿಯ ದರ ಮಂಗಳವಾರ ಭಾರಿ ಏರಿಕೆ ಕಂಡು ಆಭರಣ ಪ್ರಿಯರಿಗೆ ಶಾಕ್ ನೀಡಿದೆ. ದೆಹಲಿಯಲ್ಲಿ ಅಪರಂಜಿ ಚಿನ್ನ 816 ರೂಪಾಯಿ ಏರಿಕೆ ಕಂಡು 10 ಗ್ರಾಂ.ಗೆ 49,430 ರೂಪಾಯಿಗೆ ತಲುಪಿದೆ. ಬೆಳ್ಳಿ ದರ 3,063 ರೂ. ಹೆಚ್ಚಳವಾಗಿದ್ದು, ಪ್ರತಿ ಕೆ.ಜಿಗೆ 64,361 ರೂಪಾಯಿಗೆ ಮುಟ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್ಗೆ 1,864 ಡಾಲರ್ ಇದ್ದು, ಬೆಳ್ಳಿ ಔನ್ಸ್ಗೆ 24.52 ಡಾಲರ್ ಇದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ನಲ್ಲಿ ಮಂಗಳವಾರ 181.54 ಅಂಶ ಏರಿಕೆ ಕಂಡು 45,608.51ಕ್ಕೆ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 37.20 ಪಾಯಿಂಟ್ ಹೆಚ್ಚಳ ಕಂಡು 13,392.95ಕ್ಕೆ ವಹಿವಾಟು ಮುಗಿಸಿದೆ. ಡಾಲರ್ ಎದುರು ರೂಪಾಯಿ 30 ಪೈಸೆ ಮೌಲ್ಯ ಹೆಚ್ಚಿಸಿಕೊಂಡಿದ್ದು, ಪ್ರತಿ ಡಾಲರ್ಗೆ 73.60 ರೂಪಾಯಿ ಆಗಿದೆ.