ತಿಂಗಳ ನಂತರ ರಾಜೀನಾಮೆ ಪ್ರಸಂಗಕ್ಕೆ ತೆರೆ; ಪಂಜಾಬ್​ 'ಕೈ' ಬಿಡದ ಸಿಧು!

sidhu
Published on

ಚಂಡೀಗಡ: ಪಂಜಾಬ್​​ ಕಾಂಗ್ರೆಸ್​​ನಲ್ಲಿ ತಳಮಳ ಮೂಡಿಸಿದ್ದ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ರಾಜೀನಾಮೆ ಪ್ರಸಂಗಕ್ಕೆ ಅಂತೂ ತೆರೆಬಿದ್ದಿದೆ. ತಾವು ಪಂಜಾಬ್​​ ಪ್ರದೇಶ್​ ಕಾಂಗ್ರೆಸ್​ ಕಮಿಟಿ(ಪಿಪಿಸಿಸಿ) ಅಧ್ಯಕ್ಷಗಿರಿಗೆ ಸೆಪ್ಟೆಂಬರ್​ ಅಂತ್ಯದಲ್ಲಿ ಸಲ್ಲಿಸಿದ್ದ ರಾಜೀನಾಮೆಯನ್ನು ವಾಪಸ್​ ಪಡೆದಿರುವುದಾಗಿ ಅವರು ಘೋಷಿಸಿದ್ದಾರೆ.

ಇಂದು(ನ.5) ಚಂಡೀಗಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಸಂಗತಿ ತಿಳಿಸಿದ ಸಿಧು, ರಾಜ್ಯಕ್ಕೆ ಹೊಸ ಅಟೋರ್ನಿ ಜನರಲ್​ರ ನೇಮಕವಾದ ನಂತರ ತಾವು ಮತ್ತೆ ಅಧಿಕಾರ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ. "ಇದು ವೈಯಕ್ತಿಕ ಅಹಂಕಾರದ ವಿಷಯವಾಗಿರಲಿಲ್ಲ, ಬದಲಿಗೆ ಪ್ರತಿಯೊಬ್ಬ ಪಂಜಾಬಿಯ ಹಿತಾಸಕ್ತಿಯಾಗಿತ್ತು" ಎಂದವರು ಹೇಳಿದ್ದಾರೆ.

ಪಂಜಾಬ್​ ಅಡ್ವೊಕೇಟ್​ ಜನರಲ್​ ಆಗಿ ಅಮರ್​ ಪ್ರೀತ್​ ಸಿಂಗ್​ ಡಿಯೋಲ್​ ಅವರನ್ನು ನೇಮಕ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿಧು, ಕೆಲವು ರಾಜಕಾರಣಿಗಳ ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಪಾಡುತ್ತಾ ಬಂದಿರುವವರಿಗೆ ರಾಜ್ಯವನ್ನು ರಕ್ಷಿಸುವ ಸ್ಥಾನ ನೀಡಲಾಗುತ್ತಿದೆ ಎಂದು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net