ಕುರ್ಚಿ ಬಿಟ್ಟರೂ ಕಡಿಮೆಯಾಗದ ಸಿದ್ದು ಕ್ರೇಜ್‌! ಮಗನಿಗೆ ‘ಅನ್ನರಾಮಯ್ಯ’ ಎಂದು ಹೆಸರಿಟ್ಟ ಅಭಿಮಾನಿ | Annaramayya

ಬೀದರ್​ನಲ್ಲಿ ಸಿದ್ದರಾಮಯ್ಯ ಅಭಿಮಾನಿ ದಂಪತಿ ತಮ್ಮ 15 ದಿನದ ಗಂಡು ಮಗುವಿಗೆ 'ಅನ್ನರಾಮಯ್ಯ' ಎಂದು ಹೆಸರಿಟ್ಟಿದ್ದಾರೆ. ಹೆಸರಿನ ಹಿಂದಿನ ವಿಶೇಷ ಕಾರಣವೇನು?
Baby named 'Annaramayya'
ಮಗುವಿಗೆ 'ಅನ್ನರಾಮಯ್ಯ' ಎಂದು ನಾಮಕರಣ
Published on: 

Siddaramaiah Anna Bhagya: ರಾಜಕಾರಣಿಗಳ ಮೇಲಿನ ಅಭಿಮಾನವನ್ನ ಜನ ಒಂದೊಂದು ರೀತಿ ತೋರಿಸ್ತಾರೆ. ಆದ್ರೆ, ಬೀದರ್ ಜಿಲ್ಲೆಯ ಈ ದಂಪತಿ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ಮೇಲಿನ ಪ್ರೀತಿಯನ್ನ ಮಗುವಿಗೆ ಹೆಸರಿಡೋ ಮೂಲಕ ತೋರಿಸಿದ್ದಾರೆ. ಹುಮ್ನಾಬಾದ್ ತಾಲೂಕಿನ ದುಗುಲಗುಂಡಿ ಗ್ರಾಮದ ರಾಜಪ್ಪ ಮತ್ತು ಅಂಬಿಕಾ ದಂಪತಿ, ತಮ್ಮ 15 ದಿನದ ಗಂಡು ಮಗುವಿಗೆ ‘ಅನ್ನರಾಮಯ್ಯ’ ಅಂತ ಹೆಸರಿಟ್ಟಿದ್ದಾರೆ.

ಅನ್ನಭಾಗ್ಯ + ಸಿದ್ದರಾಮಯ್ಯ = ಅನ್ನರಾಮಯ್ಯ

ಈ ಹೆಸರಿನ ಹಿಂದೆ ಒಂದು ಇಂಟರೆಸ್ಟಿಂಗ್ ಕಾರಣವೂ ಇದೆ. ಸಿದ್ದರಾಮಯ್ಯ ಮೇಲಿನ ಅಭಿಮಾನ ಮತ್ತು ಅವರು ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ‘ಅನ್ನಭಾಗ್ಯ’ ಯೋಜನೆಯಿಂದ ಪ್ರೇರಣೆ ಪಡೆದ ದಂಪತಿ, ಎರಡನ್ನೂ ಸೇರಿಸಿ ಮಗುವಿಗೆ ‘ಅನ್ನರಾಮಯ್ಯ’ ಅಂತ ಹೆಸರಿಟ್ಟಿದ್ದಾರೆ. ‘ಅನ್ನಭಾಗ್ಯ’ ಯೋಜನೆಯಿಂದ ‘ಅನ್ನ’ ಮತ್ತು ಸಿದ್ದರಾಮಯ್ಯ ಹೆಸರಿನಲ್ಲಿರುವ ‘ರಾಮಯ್ಯ’ ಪದವನ್ನ ಸೇರಿಸಿ ಈ ಹೆಸರು ಇಟ್ಟಿದ್ದಾರಂತೆ.

ಮಗು ಹುಟ್ಟುವ ಮೊದಲೇ ಹೆಸರಿನ ನಿರ್ಧಾರ

ಇನ್ನೊಂದು ವಿಶೇಷ ಅಂದ್ರೆ, ಮಗು ಹುಟ್ಟೋ ಮೊದಲೇ ದಂಪತಿ ಹೆಸರನ್ನೂ ಫಿಕ್ಸ್ ಮಾಡಿದ್ದರಂತೆ. ಹೆಣ್ಣು ಮಗು ಹುಟ್ಟಿದ್ರೆ ‘ಪಾರ್ವತಿರಾಮಯ್ಯ’ ಅಂತ, ಗಂಡು ಮಗು ಹುಟ್ಟಿದ್ರೆ ‘ಅನ್ನರಾಮಯ್ಯ’ ಅಂತ ಹೆಸರಿಡಲು ನಿರ್ಧರಿಸಿದ್ದರಂತೆ. ಅದರಂತೆ ಗಂಡು ಮಗು ಜನಿಸಿದ್ದರಿಂದ, ತಾವು ಮೊದಲೇ ಅಂದುಕೊಂಡಿದ್ದ ಹೆಸರನ್ನೇ ಇಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ದಂಪತಿ ಮಗುವಿಗೆ ಇಟ್ಟಿರುವ ಈ ವಿಭಿನ್ನ ಹೆಸರು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಕೆಲವರು ಅಭಿಮಾನವನ್ನ ಹೀಗೆ ವ್ಯಕ್ತಪಡಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಇನ್ನು ಕೆಲವರು ರಾಜಕಾರಣಿಗಳ ಬದಲು ದೇಶಕ್ಕಾಗಿ ಹೋರಾಡಿದ ಮಹನೀಯರ ಹೆಸರಿಡಬಹುದಿತ್ತಲ್ಲ ಅಂತ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮೊಬೈಲ್ ಕೈಯಲ್ಲಿದ್ರೆ ಕೆಟ್ಟ ಸುದ್ದಿಗಳೇ ಕಣ್ಣಿಗೆ ಬೀಳುತ್ತಾ? ಇದರ ಹಿಂದಿದೆ ಸೈಕಾಲಜಿ! | Negative News

ಇನ್ನೊಂದೆಡೆ, ಮಗುವಿಗೆ ಯಾವ ಹೆಸರು ಇಡಬೇಕು ಅನ್ನೋದು ಪೋಷಕರ ವೈಯಕ್ತಿಕ ಆಯ್ಕೆ. ತಮ್ಮಿಷ್ಟದ ಹೆಸರನ್ನಿಟ್ಟು ಖುಷಿಪಟ್ಟಿರುವ ದಂಪತಿಯ ನಿರ್ಧಾರವನ್ನ ಗೌರವಿಸಬೇಕು ಅನ್ನೋ ಅಭಿಪ್ರಾಯವೂ ಕೇಳಿಬಂದಿದೆ. ಒಟ್ಟಿನಲ್ಲಿ, ರಾಜಪ್ಪ ಮತ್ತು ಅಂಬಿಕಾ ದಂಪತಿ ತಮ್ಮ ನೆಚ್ಚಿನ ನಾಯಕನ ಮೇಲಿನ ಅಭಿಮಾನವನ್ನ ಮಗುವಿನ ಹೆಸರಿನ ಮೂಲಕ ತೋರಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net