

ಬೆಂಗಳೂರು: ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು 108 ಜನ್ಮದಿನ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದ ದೇವರಾಜು ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ದೇವರಾಜು ಅರಸು ಅವರು ಬಳಸುತ್ತಿದ್ದ ಬೆಂಜ್ ಕಾರಿನಲ್ಲಿ ವಿಧಾನಸೌಧದ ಆವರಣದಲ್ಲಿ ಸುತ್ತು ಹಾಕಿದರು.
ದೇವರಾಜ ಅರಸು ಅವರು ಬಳಸುತ್ತಿದ್ದ ಎಂಇಒ 777 ನಂಬರಿನ ಕಪ್ಪು ಬಣ್ಣದ ಬೆಂಜ್ ಕಾರಿನಲ್ಲಿ ವಿಧಾನಸೌಧದ ಆವರಣದಲ್ಲಿ ರೌಂಡ್ಸ್ ಹಾಕಿ ಬಳಿಕ ಅದೇ ಕಾರಿನಲ್ಲಿ ವಿಧಾನಸೌಧ ಸಭಾಂಗಣಕ್ಕೆ ಬಂದರು.
ಪ್ರತಿಜ್ಞಾ ವಿಧಿ ಬೋಧನೆ
ಸದ್ಭಾವನಾ ದಿನಾರಣೆಯ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಸಭಾಂಗಣ ಕೊಠಡಿಯಲ್ಲಿ ಪ್ರತಿಜ್ಞೆ ಬೋಧಿಸಿದರು.