

ಬೆಳಗಾವಿ: ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದೇನೆ. ಸದ್ಯ ಯಾವ ಕ್ಷೇತ್ರ ಅಂತಿಮ ಮಾಡಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೈ ಕಮಾಂಡನಿಂದ ಎಲ್ಲಿ ಸೂಚನೆ ಮಾಡ್ತಾರೆ ಅಲ್ಲಿಂದ ಮಾಡ್ತಿನಿ.ಹೈಕಮಾಂಡ ಎಲ್ಲಿ ಯಾವ ಕ್ಷೇತ್ರ ಹೇಳ್ತಾರೆ ಆ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿನಿ ಎಂದು ಅರ್ಜಿಯಲ್ಲೇ ಬರದಿದ್ದೇನೆ.
ಹೈಕಮಾಂಡ ಎಲ್ಲಿ ಸೂಚನೆ ಮಾಡುತ್ತದೆ ಅಲ್ಲಿಂದ ಮಾಡ್ತಿನಿ ಅಂತಾ ಬರೆದಿದ್ದೇನೆ.ಕೋಲಾರದಿಂದ ಸ್ಪರ್ಧೆ ಅಂತಿಮವಲ್ಲ ಎಂದರು.
ಉರಿಗೌಡ ನಂಜೆಗೌ ಸಿನಿಮಾ ವಿಷಯ ಮುಂದಿಟ್ಟುಕೊಂಡು ಏನೋ ಸೃಷ್ಟಿ ಮಾಡಿದ್ದಾರೆ ಅನಿಸುತ್ತದೆ.ನಾನು ಓದಿದ ಇತಿಹಾಸದ ಚರಿತ್ರೆಯಲ್ಲಿ ಎಲ್ಲಿಯೂ ಕೂಡ ಉರಿಗೌಡ ನಂಜೇಗೌಡ ಪಾತ್ರಗಳು ನೋಡಿಲ್ಲ, ಕೇಳಿಲ್ಲ.ಟಿಪ್ಪುಗೆ ಕೊಂದಹಾಕಿದವರು ಉರಿಗೌಡ ನಂಜೆಗೌಡ ಅಂತಾ ಎಲ್ಲಿಯೂ ಓದಿಲ್ಲ. ಈಗ ಅವರು ಏನಾದರೂ ದಾಖಲೆ ಇದ್ದರೆ ಕೊಡಲಿ ಎಂದ ಸಿದ್ದರಾಮಯ್ಯ ಹೇಳಿದರು.