ಪ್ರಧಾನಿ ಮೋದಿ ಮಾದರಿಯಲ್ಲೇ ಸಿಎಂ ಸಿದ್ದರಾಮಯ್ಯಗೂ ಸೆಂಗೋಲ್ ಪ್ರದಾನ; ರಾಜದಂಡದ ಮೇಲೆ ಪೆರಿಯಾರ್ ಭಾವಚಿತ್ರ…

Periyar Sengol
Published on

ಬೆಂಗಳೂರು: ನೂತನ ರಾಜಭವನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ, ಸೆಂಗೋಲ್​ಅನ್ನು ಸ್ಥಳಾಂತರಿಸಿದ್ದು ಭಾರಿ ಸುದ್ದಿಯನ್ನು ಮಾಡಿತ್ತು. ಇದರ ಬಗ್ಗೆ ಕೆಲ ವಿಪಕ್ಷಗಳಿಂದ ಭಾರಿ ವಿರೋಧವೂ ವ್ಯಕ್ತವಾಗಿತ್ತು. ಇದೀಗ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂದು ಸೆಂಗೋಲ್​ ಅನ್ನು ಸ್ವೀಕರಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಇಂದು ಸಾಮಾಜಿಕ ನ್ಯಾಯದ ಹಾಗೂ ಸೆಕ್ಯುಲರ್​ ಸೆಂಗೋಲ್​ಅನ್ನು ತಮಿಳುನಾಡು ಮೂಲದ ಸಂಘಟನೆಯೊಂದು ಪ್ರದಾನ ಮಾಡಲಿದೆ. ಇಂದು ಸಂಜೆ ಸೆಕ್ಯೂಲರ್ ಸೆಂಗೋಲ್ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಅಂದ ಹಾಗೆ ಈ ಸೆಕ್ಯೂಲರ್ ಸೆಂಗೋಲ್​ಅನ್ನು ನೀಡುತ್ತಿರುವುದು ತಮಿಳುನಾಡಿನ ಪೇರವೈ ಸಂಘಟನೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 6 ಗಂಟೆಗೆ ಸೆಂಗೋಲ್ ಪ್ರದಾನ ಕಾರ್ಯಕ್ರಮ ನಡೆಯಲಿದ್ದು ಅದರ ಮೇಲೆ ಪೆರಿಯಾರ್​ ಭಾವಚಿತ್ರ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net