ಎಚ್​ಡಿಕೆ ಜಾತಿ ಕಾರ್ಡ್​ ವರ್ಕೌಟ್​ ಆಗಲ್ಲ; ಸಿದ್ದರಾಮಯ್ಯ ಲೇವಡಿ

HDK-Siddaramaiah
Published on

ಬೆಂಗಳೂರು: ಎಚ್​.ಡಿ. ಕುಮಾರಸ್ವಾಮಿ ಚುನಾವಣೆ ಬಂದಾಗ ಜಾತಿ ಕಾರ್ಡ್​ ಪ್ಲೇ ಮಾಡುತ್ತಾರೆ. ಇದು ವರ್ಕೌಟ್​ ಆಗಲ್ಲ. ಯಾವ ಸಮುದಾಯವೂ ಒಬ್ಬರ ಹಿಂದೆಯೇ ಹೋಗಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ವಕ್ಕಲಿಗರು ಕುಮಾರಸ್ವಾಮಿ ಇಲ್ಲವೇ ಇನ್ನೊಬ್ಬರ ಜತೆಗೆ ಹೋಗಲ್ಲ. ಹಾಗಾದರೆ ಮಂಡ್ಯದಲ್ಲಿ ಕುಮಾರಸ್ವಾಮಿ ಮಗನನ್ನು ಜನ ಏಕೆ ಸೋಲಿಸಿದ್ರು? ತುಮಕೂರಿನಲ್ಲಿ ದೇವೇಗೌಡರನ್ನು ಏಕೆ ಸೋಲಿಸಿದ್ರು? ಎಂದು ಪ್ರಶ್ನಿಸಿದರು.

ಈ ಜಾತಿ ಕಾರ್ಡ್​ ವರ್ಕೌಟ್​ ಆಗಲ್ಲ. ಜೆಡಿಎಸ್​ಗೆ ಅಭ್ಯರ್ಥಿಗಳಿಲ್ಲ. ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವೆ ಫೈಟ್​ ನಡೆಯುತ್ತಿದೆ ಎಂದು ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ಸಿದ್ದರಾಮಯ್ಯ ವಿಶ್ಲೇಷಿಸಿದರು.

ಅ.14ರಂದು ರಾಜರಾಜೇಶ್ವರಿ ನಗರದಲ್ಲಿ ಕುಸುಮಾ, 15ರಂದು ಶಿರಾದಲ್ಲಿ ಜಯಚಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ಎರಡು ಕಡೆಯೂ ನಾನು ಹೋಗುವೆ. ಪ್ರತಿ ವಾರ್ಡ್​ಗೆ ಒಂದೊಂದು ತಂಡ ರಚಿಸಿ ಜವಾಬ್ದಾರಿ ನೀಡಲಾಗಿದೆ ಎಂದರು.

ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ, ಬಿಜೆಪಿ ಅಭ್ಯರ್ಥಿಗಳನ್ನು ಒಪ್ಪಲು ಸ್ಥಳೀಯ ಜನರಿಗೆ ಇಷ್ಟ ಇಲ್ಲ. ಹಾಗಾಗಿ ಅವರ ಪಕ್ಷದಲ್ಲಿ ಸಂಘರ್ಷ ನಡೆಯುತ್ತಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net