ಚುನಾವಣೆ ಸಿದ್ಧತೆಯಲ್ಲಿರುವ ಸಿದ್ದರಾಮಯ್ಯ; ಪ್ರಚಾರಕ್ಕೆ ತೆರಳಲು ಬಂತು ಐಷಾರಾಮಿ ಬಸ್!

Bus
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಸದ್ಯಕ್ಕೆ ವರುಣಾ, ಬಾದಾಮಿ ಹಾಗೂ ಕೋಲಾರ ಮೂರು ಕ್ಷೇತ್ರಗಳ ಆಯ್ಕೆ ಸಿದ್ದರಾಮಯ್ಯರ ಮುಂದಿದೆ. ಈ ಬಾರಿ ಕೋಲಾರದಿಂದ ಸ್ಪರ್ಧಿಸುವಂತೆ ಭಾರಿ ಒತ್ತಡ ಬಂದಿದ್ದು, ಅಲ್ಲಿನ ಜನರ ನಾಡಿಮಿಡಿತ ಅರಿಯುವ ಸಲುವಾಗಿ ಇಂದು ಕೋಲಾರಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಸುಮಾರು 300 ಕೆಜಿ ಆಪಲ್ ಹಾರ ಹಾಕಿ ಕ್ರಿಶ್ಚಿಯನ್​ ಮುಖಂಡರು ಸ್ವಾಗತ ಕೋರಿದ್ದಾರೆ.

ಚುನಾವಣಾ ಪ್ರಚಾರಕ್ಕೆಂದು ಸಿದ್ದಪಡಿಸಿರುವ ವಿಶೇಷ ಬಸ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ತೆರಳಿದ್ದಾರೆ. ಚುನಾವಣಾ ಸಮಯ ಹತ್ತಿರವಾಗುತ್ತಿದ್ದು, ಪ್ರಚಾರ ಆರಂಭಿಸಲು ರಾಜಕೀಯ ಪಕ್ಷಗಳು ಹಾಗೂ ಹಿರಿಯ ನಾಯಕರು ತಮ್ಮದೇ ಆದಂತಹ ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ.

ಇದೀಗ ಚುನಾವಣಾ ಪ್ರಚಾರಕ್ಕೆ ತೆರಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಐಷಾರಾಮಿ ಬಸ್ಸು ಸಿದ್ಧವಾಗಿದೆ. ಈ ಬಸ್ಸು ಎಲ್ಲಾ ರೀತಿಯ ಸಕಲ ಸೌಕರ್ಯಗಳನ್ನು ಹೊಂದಿದೆ.

ಸಿದ್ದರಾಮಯ್ಯ ಪ್ರವಾಸಕ್ಕಾಗಿ ತಯಾರಾಗಿರೋ ವಿಶೇಷ ಬಸ್ ನಲ್ಲಿ ಏನಿದೆ!?
  • ಡ್ರೈವರ್ ಹೊರತುಪಡಿಸಿ 6 ಜನ ಕೂತು ಪ್ರಯಾಣ ಮಾಡಲು ವಿಶೇಷ ಸೀಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಸೀಟುಗಳು ಫುಶಿಂಗ್ ಸೌಲಭ್ಯವನ್ನು ಹೊಂದಿದೆ.
  • ಇಡೀ ಬಸ್​ಗೆ ಸಂಪೂರ್ಣ ಹವಾನಿಯಂತ್ರಿತ ಮತ್ತ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.
  • ಬಸ್ ವಿಂಡೋಗಳನ್ನು ಗಾಜಿನಲ್ಲಿ ಮಾಡಲಾಗಿದ್ದು, ಬಸ್​ನಲ್ಲಿ ಕುಳಿತು ಜನರನ್ನು ಮಾದರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.
  • ಬಸ್ಸಿನ ಒಳಗೆ ನಿಂತು ಭಾಷಣ ಮಾಡಲು ವಿಶೇಷ ತಂತ್ರಜ್ಞಾನದ ಲಿಫ್ಟ್ ಪೋಡಿಯಂ.
  • ಪ್ರಚಾರದ ವೇಳೆ ವಿಶ್ರಾಂತಿ ತೆಗೆದುಕೊಳ್ಳಲು ಬೆಡ್ ವ್ಯವಸ್ಥೆ.
  • ಬಸ್​​ನಲ್ಲಿ ಪ್ರತ್ಯೇಕ ಬಾತ್ ರೂಂ ವ್ಯವಸ್ಥೆ.
  • ಪ್ರಚಾರ ಸಮಯದಲ್ಲಿ ಟಿವಿ ವೀಕ್ಷಣೆಗೆ 3 LED TVಗಳ ಸೌಲಭ್ಯ
  • ಹ್ಯಾಂಡ್ ವಾಶ್​​ಗೆ ಸಿಂಕ್ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಹಾಗೂ ಸಂಪೂರ್ಣ ವೈಫೈ ಕನೆಕ್ಷನ್ ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net