ಮಾಜಿ ಸಿಎಂ ಸಿದ್ದರಾಮಯ್ಯರ ಭಾಷಣ ಕೇಳಲು ಹೋಗಿದ್ದವರು ಮರಳುವಾಗ ಕಾರು ಪಲ್ಟಿ, ಮೂವರಿಗೆ ಗಂಭೀರ ಗಾಯ

Car
Published on

ಕಲಬುರಗಿ: ವಿಧಾನಸಭಾ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣ ಕೇಳಲು ಹೋಗಿದ್ದ ಅಭಿಮಾನಿಗಳು ಮರಳುವಾಗ ಕಾರು ಪಲ್ಟಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆದ ದಿ. ಧರ್ಮಸಿಂಗ್ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಭಾಷಣವನ್ನು ಕೇಳಬೇಕು ಎಂತಲೇ ಇವರು ಹೋಗಿದ್ದರು. ಆದರೆ ಅಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಮರಳುವಾಗ ಇವರಿದ್ದ ಡಸ್ಟರ್ ಕಾರು ಕಟ್ಟಿಸಂಗಾವಿ ಎಂಬಲ್ಲಿ ಪಲ್ಟಿಯಾಗಿದೆ.

ಈ ಅಪಘಾತದಲ್ಲಿ ಶಿವಲಿಂಗಪ್ಪ ಸಿದ್ದಣ್ಣಗೋಳ (38), ಶರಣಬಸಪ್ಪ ಬಾವಿಕಟ್ಟಿ (42), ಶರಣಬಸಪ್ಪ ಅಂತರಗಂಗಿ (36) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ನಿವಾಸಿಗಳು. ಮೂವರನ್ನೂ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net