ರಾಯಚೂರಲ್ಲಿ ಪ್ರೇಮಿಗಳಿಬ್ಬರ ದೇಹ ಎರಡೆರಡು ಚೂರು; ಹಳಿಗೆ ತಲೆಯೊಡ್ಡಿ ಪ್ರಾಣ ಕಳ್ಕೊಂಡ ಲವರ್ಸ್, ಇಬ್ಬರ ರುಂಡವೂ ಕಟ್!

Lovers
Published on

ರಾಯಚೂರು: ಪ್ರೇಮಿಗಳಿಬ್ಬರು ರೈಲು ಹಳಿಗೆ ತಲೆಯೊಡ್ಡಿ ಭೀಕರವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ರಾಯಚೂರಿನಲ್ಲಿ ನಡೆದ ಈ ಪ್ರಕರಣದಲ್ಲಿ ಪ್ರೇಮಿಗಳಿಬ್ಬರ ದೇಹವೂ ಎರಡು ಚೂರಾಗಿದೆ. ರಾಯಚೂರು ಸಮೀಪದ ಕೃಷ್ಣ ರೈಲ್ವೆ ನಿಲ್ದಾಣದಲ್ಲಿ ಈ ಪ್ರಕರಣ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿರುವ ಪ್ರೇಮಿಗಳನ್ನು ತೆಲಂಗಾಣದ ಎಮ್ಮಿಗನೂರು ಮೂಲದ ಶಿವಕುಮಾರ್ (26), ಅನಿತಾ (17) ಎಂದು ಗುರುತಿಸಲಾಗಿದೆ. ರೈಲು ಬರುವ ವೇಳೆ ಇಬ್ಬರೂ ಜೊತೆಯಾಗಿ ಹಳಿ ಮೇಲೆ ಕೊರಳೊಡ್ಡಿ ಮಲಗಿದ್ದು, ಇಬ್ಬರ ರುಂಡ-ಮುಂಡ ಬೇರೆಯಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ರಾಯಚೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರೇಮಿಗಳು ಯಾಕೆ ಹೀಗೆ ಮಾಡಿಕೊಂಡರು ಇತ್ಯಾದಿ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ. ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net