More

    ಕಾಲೇಜು ವಿದ್ಯಾರ್ಥಿನಿಯರಿಗೂ ಹೆರಿಗೆ ರಜೆ ನೀಡಲು ಮುಂದಾದ ವಿಶ್ವವಿದ್ಯಾಲಯ; ಎಲ್ಲಿ, ಎಷ್ಟು ತಿಂಗಳು?

    ಕೊಚ್ಚಿ: ಮಹಿಳೆಯರಿಗೆ, ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆ ಕೊಡುವುದು ಹೊಸದೇನಲ್ಲ. ಆದರೆ ಇಲ್ಲೊಂದು ಕಡೆ ಕಾಲೇಜು ವಿದ್ಯಾರ್ಥಿನಿಯರಿಗೇ ಹೆರಿಗೆ ರಜೆಯನ್ನು ನೀಡಲು ವಿಶ್ವವಿದ್ಯಾಲಯವೊಂದು ಮುಂದಾಗಿರುವ ಸಂಗತಿ ಬೆಳಕಿಗೆ ಬಂದಿದೆ.

    ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ (ಎಂಜಿಯು) ಇಂಥದ್ದೊಂದು ನಿರ್ಧಾರವನ್ನು ಕೈಗೊಂಡಿದೆ. 18 ವರ್ಷ ಮೇಲ್ಪಟ್ಟ ಅಂದರೆ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುವ ಎಲ್ಲ ಅರ್ಹ ವಿದ್ಯಾರ್ಥಿನಿಯರಿಗೂ ಹೆರಿಗೆ ರಜೆಯನ್ನು ನೀಡಲಿದೆ.

    ಪ್ರೊ ವೈಸ್ ಚಾನ್ಸೆಲರ್ ಸಿ.ಟಿ. ಅರವಿಂದ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಹೆರಿಗೆ ರಜೆಯನ್ನು ಹೆರಿಗೆಗೂ ಮೊದಲು ಅಥವಾ ಹೆರಿಗೆ ನಂತರವೂ ತೆಗೆದುಕೊಳ್ಳಬಹುದು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

    ಈ ಹೆರಿಗೆ ರಜೆಯು ಮೊದಲ ಅಥವಾ ಎರಡನೇ ಹೆರಿಗೆಗೆ ಮಾತ್ರ ಸೀಮಿತವಾಗಿರಲಿದೆ ಮತ್ತು ಒಂದು ಕೋರ್ಸ್​ನ ಅವಧಿಯಲ್ಲಿ ಒಮ್ಮೆ ಮಾತ್ರ ತೆಗೆದುಕೊಳ್ಳಬಹುದು ಎಂಬ ಷರತ್ತನ್ನೂ ವಿಧಿಸಲಾಗಿದೆ. ಸಾರ್ವಜನಿಕ ಹಾಗೂ ನಿಯಮಿತ ರಜೆಗಳನ್ನು ಒಳಗೊಂಡಂತೆ ಒಟ್ಟು 60 ದಿನಗಳ ರಜೆಯನ್ನು ತೆಗೆದುಕೊಳ್ಳಬಹುದು. ಅಲ್ಲದೆ ಗರ್ಭಪಾತ ಅಥವಾ ಟ್ಯೂಬೆಕ್ಟಮಿ ಇತ್ಯಾದಿಯಂಥ ಸಂದರ್ಭಗಳಲ್ಲಿ 14 ದಿನಗಳ ಹೆಚ್ಚುವರಿ ರಜೆಯನ್ನೂ ನೀಡಲಾಗುವುದು ಎಂದು ವಿವಿ ತಿಳಿಸಿದೆ.

    ಹೆರಿಗೆಯ ಕಾರಣಕ್ಕೆ ವಿದ್ಯಾರ್ಥಿನಿಯರ ಅಧ್ಯಯನಕ್ಕೆ ತೊಂದರೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಣಯವನ್ನು ಈ ವಿಶ್ವವಿದ್ಯಾಲಯ ಕೈಗೊಂಡಿದೆ. ರಜೆಯಲ್ಲಿರುವ ವಿದ್ಯಾರ್ಥಿನಿಯರು ಈ ಅವಧಿಯಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡು ಹಾಜರಾಗಬಹುದು ಇಲ್ಲವೇ ಮುಂದಿನ ಸೆಮಿಸ್ಟರ್​ನಲ್ಲಿ ಸಪ್ಲಿಮೆಂಟರಿ ಎಕ್ಸಾಂ ಬರೆಯಬಹುದು. ಈ ಮೂಲಕ ಒಂದು ಸೆಮಿಸ್ಟರ್​ನಲ್ಲಿ ಮುಂದುವರಿಯುತ್ತಲೇ ಹಿಂದಿನ ಸೆಮಿಸ್ಟರ್​ನ ಪರೀಕ್ಷೆಯನ್ನೂ ಪೂರ್ಣಗೊಳಿಸಿಕೊಳ್ಳಬಹುದು ಎಂದು ವಿವಿ ತಿಳಿಸಿದೆ.

    ನಿಧಿ ಇದೆ ಎಂದು ಕನಸಲ್ಲಿ ಬಂದು ಹೇಳಿದ ದೇವರು!; ಹಾಗೆಂದು ಕಾಡಲ್ಲಿ ಬಾವಿ ತೋಡಲು ಹೋದರು.. ಆಮೇಲಾಗಿದ್ದೇನು?

    ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts