More

    ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!

    ನವದೆಹಲಿ: ರಾಜಧಾನಿ ಬೆಂಗಳೂರಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಬ್ಯಾಗ್​ಗಳಲ್ಲಿ ಕಾಂಡಂ​ ಹಾಗೂ ಗರ್ಭನಿರೋಧಕ ಮಾತ್ರೆಗಳು ಇತ್ತೀಚೆಗೆ ಪತ್ತೆಯಾಗಿದ್ದು, ಇದು ದೊಡ್ಡ ಪ್ರಮಾಣದಲ್ಲಿ ಗಮನ ಸೆಳೆದಿದ್ದು, ಈ ವಿಷಯ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ವರದಿಯಾಗಿದೆ. ಶಾಲಾ ಬಸ್​ವೊಂದರ ಫಸ್ಟ್​ ಏಯ್ಡ್​ ಕಿಟ್​ಗಳಲ್ಲಿ ಕಾಂಡಂ ಮತ್ತು ಅವಧಿ ಮುಗಿದ ಔಷಧಗಳು ಪತ್ತೆಯಾಗಿವೆ.

    ಹರಿಯಾಣದ ಗುರುಗ್ರಾಮದ ಸೆಕ್ಟರ್​-56ನ ಖಾಸಗಿ ಶಾಲೆಯೊಂದರ ಬಸ್​ನ ಫಸ್ಟ್ ಏಯ್ಡ್​ ಕಿಟ್​​ನಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಕಂಡು ಬಂದಿವೆ. ಗುರುವಾರ ಸರ್ಕಾರದ ಸಂಬಂಧಿತ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಇವೆಲ್ಲ ಕಂಡುಬಂದಿವೆ.

    ಕೇವಲ ಎಂಟು ಆಸನ ಸಾಮರ್ಥ್ಯದ ಈ ಶಾಲಾ ಬಸ್​ನಲ್ಲಿ 27 ವಿದ್ಯಾರ್ಥಿಗಳನ್ನು ತುಂಬಿರುವುದು ಕಂಡುಬಂದಿದೆ. ಅಲ್ಲದೆ ಸದರಿ ಶಾಲೆಯು ಯಾವುದೇ ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

    ಶಾಲೆಯ ಹನ್ನೊಂದು ಬಸ್​ಗಳ ಪೈಕಿ ಒಂದರಲ್ಲಿ ಕಾಂಡಂ ಪತ್ತೆಯಾಗಿದೆ. ಅಲ್ಲದೆ 2021ರ ಫೆಬ್ರವರಿಗೇ ಅವಧಿ ಮುಗಿದಿದ್ದ ಔಷಧ, ಆ್ಯಂಟಿಸೆಪ್ಟಿಕ್ ಲೋಷನ್ ಕೂಡ ಸಿಕ್ಕಿವೆ. ಇನ್ನೊಂದರಲ್ಲಿ ಪೇನ್​ ಕಿಲ್ಲರ್ ಮಾತ್ರೆಗಳು ಸಿಕ್ಕಿದ್ದು, ಅದರ ಅವಧಿ 2020ರಲ್ಲೇ ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪರಿಶೀಲನೆ ವೇಳೆ ಪತ್ತೆಯಾದ ವಸ್ತುಗಳು ಹಾಗೂ ಕಂಡುಬಂದ ಅಂಶಗಳಿಗೆ ಸಂಬಂಧಿಸಿದಂತೆ ಆ ಶಾಲೆಗೆ ಪತ್ರ ಬರೆಯಲಾಗಿದ್ದು, ಪ್ರತಿಕ್ರಿಯೆ ನಿರೀಕ್ಷೆಯಲ್ಲಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶಾಲಾ ಬಸ್​​ನಲ್ಲಿ ಕಾಂಡಂ ಸಿಕ್ಕಿರುವುದು ಅಪರಾಧ, ಈ ಪ್ರಕರಣದ ಸಂಬಂಧ ತನಿಖೆ ನಡೆಸಲಾಗುವುದು ಎಂದು ಗುರುಗ್ರಾಮದ ಡಿಸಿ ತಿಳಿಸಿದ್ದಾರೆ.

    ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ

    ಚಾಲಕನಿಗೆ 33 ಕೋಟಿ ರೂ. ಬಂಪರ್ ಬಹುಮಾನ; ನಂಬೋಕೇ ಆಗ್ತಿಲ್ಲ ಅಂದವ ‘ಟ್ರಸ್ಟ್’ ಮಾಡ್ತೇನೆ ಎಂದ!

    ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts