ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ

blank

ಬೆಂಗಳೂರು: ಡಾ.ರಾಜಕುಮಾರ್ ಕುಟುಂಬದ ವಿರುದ್ಧ ಹಗುರವಾಗಿ ಮಾತನಾಡಿದ ಆರೋಪದ ಮೇರೆಗೆ ಕನ್ನಡಪರ ಹೋರಾಟಗಾರರು ಪುನೀತ್ ಕೆರೆಹಳ್ಳಿ ಎಂಬಾತನ ಮೇಲೆ ದಾಳಿ ನಡೆಸಿದ್ದು, ಅಂಗಿ ಹಿಡಿದು ಎಳೆದಾಡಿದ್ದಾರೆ. ಚಾಮರಾಜಪೇಟೆಯಲ್ಲಿ ಇಂದು ಈ ಪ್ರಕರಣ ನಡೆದಿದೆ.

ಕನ್ನಡಪರ ಹೋರಾಟಗಾರ ಶಿವಕುಮಾರ್ ತಂಡದವರು ಚಾಮರಾಜಪೇಟೆಯಲ್ಲಿ ಇಂದು ರಾತ್ರಿ 8.30ರ ಸುಮಾರಿಗೆ ಪುನೀತ್ ಕೆರೆಹಳ್ಳಿಯನ್ನು ಅಡ್ಡಗಟ್ಟಿ, ಅಂಗಿ ಹಿಡಿದು ಎಳೆದಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಘಟನೆ ಬಗ್ಗೆ ಪುನೀತ್ ರಾಜಕುಮಾರ್ ವಿರುದ್ಧ ಪುನೀತ್ ಕೆರೆಹಳ್ಳಿ ಹಗುರವಾಗಿ ಮಾತನಾಡಿದ್ದ ಎಂದು ಶಿವಕುಮಾರ್ ಮತ್ತಿತರರು ಆರೋಪಿಸಿದ್ದು, ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಆದರೆ ನಾನ್ಯಾಕೆ ಕ್ಷಮೆ ಕೇಳಬೇಕು ಎಂದು ಪುನೀತ್ ವಾದಿಸಿದ್ದು, ವಾಗ್ವಾದ ವಿಕೋಪಕ್ಕೆ ಹೋಗಿ ಹೊಯ್​ಕೈ ನಡೆದಿದ್ದು, ಈ ಕುರಿತ ವಿಡಿಯೋ ಕೂಡ ಹರಿದಾಡಲಾರಂಭಿಸಿದೆ.

ಡಾ.ರಾಜಕುಮಾರ್ ಕುಟುಂಬದ ಬಗ್ಗೆ ನೀನು ಹೇಗೆ ಮಾತಾಡಿದೆ ಅಂತ ಫೇಸ್​​ಬುಕ್​ನಲ್ಲಿ ಕನ್ನಡಪರ ಮುಖಂಡ ಶಿವಕುಮಾರ್ ನಾಯ್ಕ್ ಪ್ರಶ್ನಿಸಿದ್ದು, ಬಳಿಕ ಇಬ್ಬರ ಮಧ್ಯೆ ಫೋನ್​ನಲ್ಲಿ ಮಾತುಕತೆ ನಡೆದಿದೆ. ಆಗ ನಾನು ಚಾಮರಾಜಪೇಟೆಗೆ ಬಂದಿದ್ದೇನೆ ಬಾ ಎಂದು ಪುನೀತ್ ಕೆರೆಹಳ್ಳಿ ಕರೆದಿದ್ದು, ಅಲ್ಲಿಗೆ ಶಿವಕುಮಾರ್ ಮತ್ತು ತಂಡ ಹೋಗಿದ್ದು, ಅಲ್ಲಿ ಈ ಪ್ರಕರಣ ನಡೆದಿದೆ. ಸದ್ಯ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಮರಾಜಪೇಟೆ ಪೊಲೀಸರಿಂದ ವಿಚಾರಣೆ ನಡೆಸುತ್ತಿದ್ದಾರೆ.

ಗಂಡನನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಮಹಿಳೆ!

ಪತಿಯ ನಿಧನದ ಎರಡೇ ಗಂಟೆಗಳಲ್ಲಿ ಸಾವಿಗೀಡಾದ ಪತ್ನಿ!

Share This Article

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…

ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging

hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…