More

    ಚಾಲಕನಿಗೆ 33 ಕೋಟಿ ರೂ. ಬಂಪರ್ ಬಹುಮಾನ; ನಂಬೋಕೇ ಆಗ್ತಿಲ್ಲ ಅಂದವ ‘ಟ್ರಸ್ಟ್’ ಮಾಡ್ತೇನೆ ಎಂದ!

    ದುಬೈ: ಲಾಟರಿಯಿಂದಾಗಿ ಇದ್ದಕ್ಕಿದ್ದಂತೆ ಏನೂ ಶ್ರಮವಿರದೆ ಕೋಟ್ಯಧಿಪತಿಗಳಾದವರು ಕೆಲವರಿದ್ದಾರೆ. ಅದರಲ್ಲೂ ಅಂಥ ಏನೂ ದುಡಿಮೆ ಇರದೆ ಹೀಗೆ ದಿಢೀರ್ ಎಂದು ಕೋಟ್ಯಧಿಪತಿಗಳಾದವರ ಪಟ್ಟಿಗೆ ಇದೀಗ ಇನ್ನೊಂದು ಹೆಸರು ಸೇರಿಕೊಂಡಿದೆ. ಚಾಲಕನಾಗಿರುವ ಈತನಿಗೆ ಲಾಟರಿಯಲ್ಲಿ 33 ಕೋಟಿ ರೂ. ಬಂಪರ್ ಬಹುಮಾನ ಬಂದಿದೆ.

    ದಕ್ಷಿಣ ಭಾರತದ ಅಜಯ್ ಒಗುಲ ಎಂಬ ಈ ವ್ಯಕ್ತಿ ದುಬೈನಲ್ಲಿ ಚಾಲಕ ವೃತ್ತಿಯಲ್ಲಿದ್ದು, ಎಮಿರೇಟ್ಸ್ ಡ್ರಾದಲ್ಲಿ ವಿಜೇತನಾಗಿದ್ದು, 15 ಮಿಲಿಯನ್​ ದಿರ್ಹಂ ಅಂದರೆ ಭಾರತೀಯ ಕರೆನ್ಸಿ ಪ್ರಕಾರ 33 ಕೋಟಿ ರೂ. ಗಳಿಸಿದ್ದಾನೆ. ಇಂಥ ದೊಡ್ಡ ಮೊತ್ತದ ಬಂಪರ್​ ಬಹುಮಾನವನ್ನು ಗೆದ್ದಿದ್ದು, ನನಗಿನ್ನೂ ನಂಬೋಕೇ ಆಗ್ತಿಲ್ಲ ಎಂದು ಈತ ತನ್ನ ಸಂತೋಷವನ್ನು ಹಂಚಿಕೊಂಡಿದ್ದಾನೆ. ಮಾತ್ರವಲ್ಲ, ಈ ವಿಷಯವನ್ನು ಭಾರತದಲ್ಲಿರುವ ತನ್ನ ಮನೆಯವರಿಗೆ ಹೇಳಿದಾಗಲೂ ಅವರು ಕೂಡ ಮೊದಲಿಗೆ ನಂಬಲಿಲ್ಲ. ಆದರೆ ಈಗ ಎಲ್ಲ ಕಡೆ ನಾನು ಸುದ್ದಿಯಲ್ಲಿ ಬಂದಿರುವುದರಿಂದ ಅವರು ಈಗ ನಂಬಬಹುದು ಎಂದು ಹೇಳಿಕೊಂಡಿದ್ದಾನೆ.

    ಈ ಹಣದಿಂದ ಒಂದು ಚಾರಿಟೇಬಲ್ ಟ್ರಸ್ಟ್ ಮಾಡುತ್ತೇನೆ. ನನ್ನ ಊರು ಹಾಗೂ ಸುತ್ತಲಿನ ಹಳ್ಳಿಗಳ ಜನರಿಗೆ ಕೆಲವು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಇದರಿಂದ ಅನುಕೂಲವಾಗುತ್ತದೆ ಎಂದು ಆತ ತನ್ನ ಲಾಟರಿ ಹಣದ ವಿನಿಯೋಗದ ಬಗ್ಗೆ ಹೇಳಿಕೊಂಡಿದ್ದಾನೆ.

    ನಾಲ್ಕು ವರ್ಷಗಳ ಹಿಂದೆ ದುಬೈಗೆ ಬಂದಿದ್ದ ಅಜಯ್, ಇಲ್ಲಿನ ಜುವೆಲ್ಲರಿ ಸಂಸ್ಥೆಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 72 ಸಾವಿರ ರೂ. ಸಂಬಳ ಪಡೆದುಕೊಳ್ಳುತ್ತಿದ್ದಾನೆ.

    ಲಾಟರಿಯಲ್ಲಿ ಆಟೋ ಚಾಲಕನಿಗೆ 25 ಕೋಟಿ ರೂ. ಬಂಪರ್​ ಪ್ರೈಜ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts