

ಬೆಂಗಳೂರು: ರಾಜ್ಯಕ್ಕೆ ಗಟ್ಟಿಯಾದ ನೇತೃತ್ವ ಇದೆ. ಆದರೆ, ನಾಯಕತ್ವವನ್ನ ಕುಗ್ಗಿಸಬೇಕು ಎಂದು ಬಿಜೆಪಿ, ಜೆಡಿಎಸ್ ನವರು ಒಂದಾಗಿ ಹೊರಟಿದ್ದಾರೆ. ಸರ್ಕಾರಕ್ಕೂ ತೊಂದರೆ ಮಾಡಬೇಕೆಂದು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ಸಿದ್ದರಾಮಯ್ಯ ಅವರೇ ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಾರೆ. ಐದು ವರ್ಷ ಅನ್ನೋದು ಗೊತ್ತಿಲ್ಲ, ಈಗಂತೂ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.
ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದೀಗ ಹೈಕೋರ್ಟ್‌ನಲ್ಲಿ ವಾದ, ಪ್ರತಿವಾದ ನಡೆಯುತ್ತಿದೆ. ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ. ತೀರ್ಪು ಬಂದ ನಂತರ ಮುಂದೆ ಏನು ಮಾಡಬೇಕೋ ನೋಡೋಣ. ಸದ್ಯಕ್ಕೆ ಶನಿವಾರ ರಾಜಭವನ ಚಲೋ ಮಾಡುತ್ತೇವೆ ಎಂದರು.