

ರಾಣೆಬೆನ್ನೂರ: ರಾಜ್ಯದ ಕಾಂಗ್ರೆಸ್ ಶಾಸಕರು ಗ್ಯಾರಂಟಿ ಬಂದ್ ಮಾಡಿ ಅಭಿವೃದ್ಧಿಗೆ ಹಣ ಕೊಡಿ ಎನ್ನುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಆರ್ಥಿಕ ತಜ್ಞ, 16 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಅದು ಹೇಗೆ ಆರ್ಥಿಕ ತಜ್ಞ ಆದರ್ೋ ಗೊತ್ತಿಲ್ಲ ಎಂದು ನೂತನ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ಮತದಾರರ ಅಭಿನಂದನೆ ಹಾಗೂ ನೂತನ ಸಂಸದರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಖಜಾನೆ ತುಂಬಿದೆ ಎಂದು ಹೇಳುವ ಸಿದ್ದರಾಮಯ್ಯ ಎಲ್ಲದರ ಟ್ಯಾಕ್ಸ್ ಏಕೆ ಏರಿಕ್ೆ ಮಾಡಿದರು. ಈಗ ಏಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದ್ದೀರಿ ಎಂದು ಪ್ರಶ್ನಿಸಿದ ಬೊಮ್ಮಾಯಿ, ಇದರಿಂದ ರೈತರಿಗೆ, ತರಕಾರಿ, ಟ್ಯಾಕ್ಸಿ, ಬಸ್ ಬೆಲೆ ಸೇರಿ ಎಲ್ಲದರ ಬೆಲೆ ಹೆಚ್ಚಳವಾಗಲಿದೆ. ಇದು ರಾಜ್ಯ ಜನರಿಗೆ ಕಾಂಗ್ರೆಸ್ ಸರ್ಕಾರ ಹೇರಿದ ಹೊರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನಿಂದ ಅತಿದೊಡ್ಡ ಅಪಪ್ರಚಾರ ನಡೆದಿತ್ತು. ಆದರೆ ದೇಶದ ಮತದಾತರರು ಮೋದಿಯವರನ್ನು ಅಧಿಕಾರಕ್ಕೆ ತಂದಿದ್ದಾರೆ. ಮೂರನೇ ಬಾರಿಗೆ ಮೋದಿಯವರು ಪ್ರಧಾನಿ ಆಗದಿದ್ದರೆ ಆತಂಕದಲ್ಲಿ ನಾವು ದಿನ ಕಳೆಯಬೇಕಿತ್ತು ಎಂದರು.
ಮೋದಿಯವರು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಜಗತ್ತಿನಲ್ಲಿಯೆ ದೇಶವನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಕೆಲ ಶಕ್ತಿಗಳು ಮೋದಿಯವರು ಯಾವ ಕಾರಣಕ್ಕೂ ಪ್ರಧ್ನಾಿ ಆಗಬಾರದು ಎಂದು ವಿಚಿತ್ರ ಶಕ್ತಿ ಪ್ರದರ್ಶಿಸಿದರು. ಆದರೆ ಯಾವ ದುಷ್ಟಶಕ್ತಿಗಳು ಮೋದಿಯವರನ್ನು ತಡೆಯಲು ಆಗಲಿಲ್ಲ ಎಂದರು.
ಕಾಂಗ್ರೆಸ್ ನವರು ಹ್ಯಾಂಗ್ ಅದಾರ ಎಂದರೆ ನಾವು ಗೆದ್ದರೂ ತಾವು ಗೆದ್ದಂತೆ ಮಾತನಾಡುತ್ತಿದ್ದಾರೆ. 90 ಸೀಟು ಬಂದರೂ ಪೂರ್ಣ ಬಹುಮತ ಬಂದಂತೆ ಮಾಡುತ್ತಿದ್ದಾರೆ.
ಕಾಂಗ್ರೆಸ್ 90 ಬಂದು ಬೇರೆ ಬೇರೆ ಪಕ್ಷ ಸೇರಿ ಸಂಖ್ಯೆ ಏರಿದೆ. ಆದರೂ ಪಕ್ಕದ ಮನೆಯಲ್ಲಿ ಗಂಡು ಹುಟ್ಟಿದಂತೆ ಪೇಡೆ ಹಂಚುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನೊಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ. ಜನತೆ ಸಂಪೂರ್ಣ ಭ್ರಮನಿರಸಗೊಂಡಿದ್ದಾರೆ. ಲೋಕಸಭೆ ಚುನಾವಣೆ ಸನಯದಲ್ಲಿ ಗೃಹಲಕ್ಷ್ಮೀ ಹಣವನ್ನು ಎರಡು ಬಾರಿ ಹಾಕಿದ್ದರು. ಆದರೂ ಜನತೆ ಕಾಂಗ್ರೆಸ್ ನ ಮೋಸಕ್ಕೆ ಬಲಿಯಾಗದೆ ಮಿತ್ರ ಪಕ್ಷ ಜೆಡಿಎಸ್ ಸೇರಿ 19 ಸ್ಥಾನ ಗೆಲ್ಲಿಸಿ ಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ನವರು ರಾಜಕೀಯ ಅನೀತಿ ಪಾಲಿಸುತ್ತಿದ್ದಾರೆ. ಇದು ಜನರಿಗೆ ಮಾಡುವ ದ್ರೋಹವಾಗಿದೆ. ಇದನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಜನತೆ ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೇ ಬದಲು ಈಗ ಚುನಾವಣೆ ಆಗಿದ್ದರೆ ಕಾಂಗ್ರೆಸ್ ದೂಳಿಪಟ ಆಗುತ್ತಿತ್ತು ಎಂದರು.
ಪಕ್ಷದ ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಮತ ಹೆಚ್ಚಿಸಬೇಕು. ಅದಕ್ಕಾಗಿ ಎಲ್ಲರೂ ಮುಂದಿನ ಚುನಾವಣೆಯೊಳಗೆ ಶ್ರಮಿಸಬೇಕು.
ಪ್ರಜಾಪ್ರಭುತ್ವದಲ್ಲಿ ಮತ ಹಾಕುವವನು ದೊಡ್ಡವರು. ಮತ ತೆಗೆದುಕೊಳ್ಳುವವನು ದೊಡ್ಡವನಲ್ಲ. ಆದ್ದರಿಂದ ನಿಮಗೆ ಕೃತಜ್ಣತೆ ಸಲ್ಲಿಸುತ್ತೇನೆ ಎಂದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಮಂಜುನಾಥ ಓಲೇಕಾರ, ಭಾರತಿ ಜಂಬಗಿ, ಕೆ. ಶಿವಲಿಂಗಪ್ಪ, ಪರಮೇಶಪ್ಪ ಗೂಳಣ್ಣನವರ, ಎಸ್.ಎಸ್. ರಾಲಿಂಗಣ್ಣನವರ, ಸಂತೋಷಕುಮಾರ ಪಾಟೀಲ, ಪ್ರಕಾಶ ಪೂಜಾರ, ಚೋಳಪ್ಪ ಕಸವಾಳ, ಜಿ.ಜಿ. ಹೊಟ್ಟಿಗೌಡ್ರ, ಜಟ್ಟೆಪ್ಪ ಕರೇಗೌಡ್ರ, ಮಲ್ಲಿಕಾರ್ಜುನ ಅಂಗಡಿ, ಪಕ್ಕೀರಪ್ಪ ಹಾವನೂರ, ಮಂಜುಳಾ ಹತ್ತಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.