ಒತ್ತಡದ ಜೀವನಶೈಲಿಯಿಂದ ಅನಾರೋಗ್ಯ

22 ಎಸ್ಕೆಪಿ_1 ಚಿಕಿತ್ಸಾ ಶಿಬಿರ
ಶಿಕಾರಿಪುರದಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಮಕ್ಕಳ ಅಭಿವೃದ್ಧಿ ಅಧಿಕಾರಿ ಡಾ. ಗಂಗೂಬಾಯಿ ಉದ್ಘಾಟಿಸಿದರು. ಶೈಲಾ ಯೋಗೇಶ್, ರೂಪಾ ಮಂಜುನಾಥ್ ಇತರರಿದ್ದರು.
Published on

ಶಿಕಾರಿಪುರ: ಆಹಾರ ಕ್ರಮದಲ್ಲಿ ಬದಲಾವಣೆ, ಒತ್ತಡದ ಜೀವನಶೈಲಿ, ವಿಶ್ರಾಂತರಹಿತ ಬದುಕು ನಡೆಸುವುದು ಅನೇಕ ಕಾಯಿಲೆಗಳು ಬರಲು ಕಾರಣವಾಗುತ್ತಿದೆ ಎಂದು ಮಕ್ಕಳ ಅಭಿವೃದ್ಧಿ ಅಧಿಕಾರಿ ಡಾ. ಗಂಗೂಬಾಯಿ ಹೇಳಿದರು.

ಪೌರವಿಹಾರ ಕಟ್ಟಡದಲ್ಲಿ ಸ್ಕಂದ ಮೆಡಿಕಲ್ ನಾರಾಯಣ ಹೃದಯಾಲಯ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಕ್ಯಾನ್ಸರ್ ರೋಗದ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಸೂಕ್ತ ಸಮಯದಲ್ಲಿ ವೈದ್ಯರ ಸಲಹೆ ಮಾರ್ಗದರ್ಶನ ಪಡೆಯುವುದು ಅಗತ್ಯ ಎಂದು ತಿಳಿಸಿದರು.

ಕಾಯಿಲೆಗಳಿಗೆ ಹೆದರುವ ಅವಶ್ಯಕತೆ ಇಲ್ಲ. ವಿಜ್ಞಾನ ಮುಂದುವರಿದಿದ್ದು, ಉತ್ತಮ ಆಹಾರ ಸೇವನೆ ಸೇರಿ ಆರೋಗ್ಯಕ್ಕೆ ಬೇಕಾದ ನಿತ್ಯ ಕಾರ್ಯಗಳನ್ನು ಸಮಯೋಚಿತವಾಗಿ ವೈದ್ಯರ ಸಲಹೆಯಂತೆ ಮಾಡಿದರೆ ಕಾಯಿಲೆಗಳಿಂದ ಗುಣಮುಖರಾಗಬಹುದು. ಚಿಕಿತ್ಸೆ ಪಡೆಯುವ ಮೂಲಕ ಕ್ಯಾನ್ಸರ್ ಅನ್ನು ಕೂಡ ಹಿಮ್ಮೆಟ್ಟಿಸಬಹುದು ಎಂದರು.

ಪುರಸಭೆ ಅಧ್ಯಕ್ಷೆ ಶೈಲಾ ಯೋಗೇಶ್ ಮಾತನಾಡಿ, ಕ್ಯಾನ್ಸರ್‌ಗೆ ಸರಿಯಾದ ಚಿಕಿತ್ಸೆ ಇಲ್ಲದೆ ಮರಣ ಹೊಂದುತ್ತಿದ್ದ ದಿನಗಳಿದ್ದವು. ಆದರೆ ಈಗ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗಿದ್ದು, ಬಹುತೇಕ ಎಲ್ಲ ಕಾಯಿಲೆಗಳಿಗೂ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು.

ನೂರಾರು ಮಹಿಳೆಯರು ಉಚಿತ ಪರೀಕ್ಷೆ ಹಾಗೂ ಸಲಹೆ ಪಡೆದುಕೊಂಡರು. ಪುರಸಭೆ ಉಪಾಧ್ಯಕ್ಷೆ ರೂಪಾ ಮಂಜುನಾಥ್, ಔಷಧ ವ್ಯಾಪಾರಿ ನಾಗರಾಜ್, ಸಂತೋಷ್ ಸಕ್ರಿ, ಬಿ.ಸಿ.ವೇಣುಗೋಪಾಲ್, ನಾರಾಯಣ ಹೃದಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net