ಮಗನ ಕ್ರೇಜ್​ನಿಂದ ಅಮ್ಮನ ಕೆಲಸಕ್ಕೇ ಕುತ್ತು; ವ್ಹೀಲಿಂಗ್-ಸಾವು ಪ್ರಕರಣ; ಗ್ರಾಮಸ್ಥರಿಂದ 10 ದಿನಗಳ ಗಡುವು

SI Son
Published on

ಮಂಡ್ಯ: ಮಗನ ಕ್ರೇಜ್​​ನಿಂದ ಅಮ್ಮನ ಕೆಲಸಕ್ಕೇ ಕುತ್ತು ಬಂದಂಥ ಪ್ರಕರಣವೊಂದು ನಡೆದಿದೆ. ನಂಜನಗೂಡು ಸಂಚಾರ ಠಾಣೆ ಎಸ್​ಐ ಜಾಸ್ಮಿನ್ ತಾಜ್ ಪುತ್ರ ಸೈಯದ್ ಐವಾನ್​ ಬೈಕ್ ವ್ಹೀಲಿಂಗ್ ಮಾಡಿ ಅಪಘಾತ ಎಸಗಿದ್ದು, ವೃದ್ಧರೊಬ್ಬರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಈತನ ತಾಯಿಯ ಕೆಲಸಕ್ಕೇ ಕುತ್ತು ಬಂದಿದೆ.

ನಂಜನಗೂಡಿನ ಹಿಮ್ಮಾವು ಗ್ರಾಮದಲ್ಲಿ ದನ ಕಾಯುತ್ತ ಕುಳಿತಿದ್ದವರ ಮೇಲೆ ವ್ಹೀಲಿಂಗ್ ಮಾಡುತ್ತ ಬೈಕ್ ಡಿಕ್ಕಿ ಹೊಡೆದಿದ್ದು, ಗುರುಸಿದ್ದಪ್ಪ (68) ಸಾವಿಗೀಡಾಗಿದ್ದು, ಇನ್ನೊಬ್ಬ ಯುವಕ ಗಾಯಗೊಂಡಿದ್ದ. ಈ ಪ್ರಕರಣದಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್ ಇಲಾಖೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆನಿರತ ರೈತರು ಹಾಗೂ ಕುಟುಂಬಸ್ಥರೊಂದಿಗೆ ದೂರವಾಣಿ ಮೂಕ ಎಎಸ್​ಪಿ ನಂದಿನಿ ಮಾತುಕತೆ ನಡೆಸಿದ್ದು, ಎಸ್​​ಐ ಜಾಸ್ಮಿನ್ ತಾಜ್​ರನ್ನು ಅಮಾನತುಗೊಳಿಸುವ ಭರವಸೆ ನೀಡಿದ ಬಳಿಕವಷ್ಟೇ ಪ್ರತಿಭಟನಾಕಾರರು ಪ್ರತಿಭಟನೆ ಹಿಂದೆಗೆದುಕೊಂಡಿದ್ದಾರೆ. ಎಎಸ್​ಪಿ ನಂದಿನಿ ಭರವಸೆ ಮೇರೆಗೆ ಕೆ.ಆರ್​.ಆಸ್ಪತ್ರೆ ಶವಾಗಾರದಿಂದ ಶವ ಕೊಂಡೊಯ್ದ ಕುಟುಂಬಸ್ಥರು, ಎಸ್​ಐ ಅಮಾನತಿಗೆ ಹತ್ತು ದಿನಗಳ ಗಡುವನ್ನೂ ನೀಡಿ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net