ವಿಂಬಲ್ಡನ್ ಗೆಲ್ಲಲು ಸಿನ್ನರ್​ಗೆ ಬೆಂಬಲ; ರೋಜರ್​ ಫೆಡ್ರರ್​ ನನಗೆ ಅಚ್ಚುಮೆಚ್ಚು: ಶುಭಮನ್ ಗಿಲ್

ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ಶುಭಮನ್​ ಗಿಲ್​
ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ಶುಭಮನ್​ ಗಿಲ್​
Published on
Shubman Gill: ರೋಜರ್ ಫೆಡರರ್ ನನ್ನ ಅಚ್ಚುಮೆಚ್ಚಿನ ಟೆನಿಸ್​ ತಾರೆ ಎಂದು ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ಶುಭಮನ್ ಗಿಲ್​ ಹೇಳಿಕೊಂಡಿದ್ದಾರೆ.
ವಿಂಬಲ್ಡನ್​ ಟೂರ್ನಿ ನೋಡಲು ಮೈದಾನಕ್ಕೆ ಬಂದಿದ್ದ ಗಿಲ್​ ಮಾತನಾಡಿ, ನೀವು ಒಂದು ಕ್ರೀಡೆಯನ್ನು ಆಡಿದಾಗ, ನೀವು ಅದನ್ನು ಆ ರೀತಿ ಮಾಡಲು ಎಷ್ಟು ಕೆಲಸ ಮಾಡುತ್ತೀರಿ ಎಂದು ನಿಮಗೆ ತಿಳಿಯುತ್ತದೆ. ಕ್ರಿಕೆಟ್​ನಲ್ಲಿ ನಮ್ಮ ಯಶಸ್ಸಿನ ಹಿಂದಿರುವ ಶ್ರಮ ನಮಗೆ ಮಾತ್ರ ಗೊತ್ತಿರುತ್ತದೆ. ಫೆಡರರ್ ಆಡಿದ ಅಮೋಘ ಆಟ ನೋಡಲು ಖುಷಿ ಎಂದರು. 
ಅಲ್ಕರಾಜ್ ಆಡುವ ಡ್ರಾಪ್ ಶಾಟ್, ಇದು ಕ್ರಿಕೆಟ್‌ನಲ್ಲಿನ ಶಾರ್ಟ್-ಆರ್ಮ್ ಜಬ್ ಅನ್ನು ನೆನಪಿಸುತ್ತದೆ. ನಾನು ಆ ಶಾಟ್ ಕೂಡ ಆಡುತ್ತೇನೆ. ಇದು ನನ್ನ ಟ್ರೇಡ್‌ಮಾರ್ಕ್ ಹೊಡೆತ ಹೌದು. ವಿಂಬಲ್ಡನ್ ಗೆಲ್ಲಲು ನಾನು ಸಿನ್ನರ್‌ಗೆ ಬೆಂಬಲ ನೀಡುವೆ. ಅವರೊಬ್ಬ ಅದ್ಭುತ ಆಟಗಾರ ಮತ್ತು ಅವರು ಮೈದಾನದಲ್ಲಿ ಮತ್ತು ಹೊರಗೆ ಉತ್ತಮ ಎಂದು ಅಭಿಪ್ರಾಯಿಸಿದ್ದಾರೆ.
ಕಾರ್ಲೋಸ್ ಅಲ್ಕರಾಜ್ ಅವರೊಂದಿಗೆ ನಾನು ಡಬಲ್ಸ್ ಆಡಲು ಬಯಸುತ್ತೇನೆ. ಅವರ ಜೊತೆಯಲ್ಲಿ ಆಡುವುದು ಖುಷಿ ಅನಿಸುತ್ತೆ. ಸೆರೆನಾ ವಿಲಿಯಮ್ಸ್, ರೋಜರ್ ಫೆಡರರ್ ಮತ್ತು ನಂತರ ಕ್ರಿಕೆಟಿಗರಾದ ಸರ್ ವಿವ್ ರಿಚರ್ಡ್ಸ್ ಮತ್ತು ಸಚಿನ್ ಸರ್ ಸೇರಿ ಒಟ್ಟು ಈ ನಾಲ್ಕು ದಿಗ್ಗಜರೊಂದಿಗೆ ಕುಳಿತು ಊಟ ಮಾಡಲು ಇಷ್ಟಪಡುತ್ತೇನೆ. ಇದು ನನ್ನ ಕನಸಿನ ಔತಣಕೂಟ ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net