

ಶ್ರೋಣನು ತಂತಿಗಳು ಸಡಿಲವಾಗಿದ್ದರೆ ಯಾವುದೇ ಸಂಗೀತ ಸಾಧ್ಯವಿಲ್ಲ ಎಂದಾಗ ಗುರು, ತಂತಿಗಳು ತುಂಬಾ ಬಿಗಿಯಾಗಿದ್ದರೆ ಏನಾಗುತ್ತದೆ ಎಂದು ಕೇಳಿದ. ಆಗಲೂ ಸಂಗೀತ ಸುಮಧುರವಾಗಿರಲಾರದು. ತಂತಿ ಮಧ್ಯದಲ್ಲಿರಬೇಕು. ಅದು ಸಡಿಲವಾಗಿರಬಾರದು, ಬಿಗಿಯಾಗಿರಲೂಬಾರದು. ಆಗ ಮಾತ್ರ ವೀಣೆಯನ್ನು ನುಡಿಸುವುದು ಸುಲಭ ಎಂದ. ಒಬ್ಬ ಶ್ರೇಷ್ಠ ಸಂಗೀತಗಾರ ಮಾತ್ರ ತಂತಿಗಳನ್ನು ಮಧ್ಯದದ ಶ್ರುತಿಯಲ್ಲಿ ಇಡಬಹುದು ಎಂದ.
ಗುರು ಆರು ತಿಂಗಳ ಕಾಲ ಅವನನ್ನು ಗಮನಿಸಿದ ನಂತರ ಹೇಳಿದ: ‘ವಸ್ತುಗಳನ್ನು ತ್ಯಜಿಸುವುದು ಸುಲಭ, ಆದರೆ ಅತ್ಯಂತ ಕುಶಲ ವ್ಯಕ್ತಿ ಮಾತ್ರ ಮಧ್ಯದಲ್ಲಿ ಉಳಿಯುವುದು ಹೇಗೆ ಎಂದು ತಿಳಿದಿರುತ್ತಾನೆ. ಶ್ರೋಣ, ನೀನು ಕುಶಲನಾಗು ಮತ್ತು ಸಂಗೀತದಲ್ಲಿ ತಂತಿಯ ಹಾಗೆ ಜೀವನದಲ್ಲಿ ಮಧ್ಯದಲ್ಲಿ ಇರುವುದನ್ನು ಕಲಿತುಕೋ. ಈ ಕೊನೆ ಅಥವಾ ಇನ್ನೊಂದು ಕೊನೆಗೆ ಇಲ್ಲವೆ ವಿಪರೀತಕ್ಕೆ ಹೋಗುವುದು ಸುಲಭ. ಆದರೆ ನೀನು ಯಾವಾಗಲೂ ಮಧ್ಯದಲ್ಲಿ ಉಳಿಯಬೇಕು’ ಎಂದ. ಆದರೆ ವಾಸ್ತವವಾಗಿ ಮನಸ್ಸು ಮೂರ್ಖತನದಿಂದ ಕೂಡಿದೆ. ಅದು ಯಾವಾಗಲೂ ವಿಪರೀತವನ್ನು ಆರಿಸಿಕೊಳ್ಳುತ್ತದೆ. ಏಕೆಂದರೆ ಮಧ್ಯದಲ್ಲಿ ಸ್ಥಿರವಾದರೆ ಮನಸ್ಸು ಸಾಯುತ್ತದೆ.
ಹಳೆಯ ಗಡಿಯಾರದ ಲೋಲಕವನ್ನು ನೋಡಿ. ದಿನವಿಡೀ ಚಲಿಸುತ್ತಲೇ ಇರುತ್ತದೆ. ಎಡಕ್ಕೆ ಹೋದಾಗ ಬಲಕ್ಕೆ ಹೋಗಲು ಶಕ್ತಿಯನ್ನು ಪಡೆಯುತ್ತದೆ. ಬಲಕ್ಕೆ ಹೋಗುತ್ತಿರುವಾಗ ಎಡಕ್ಕೆ ಹೋಗಲು ಶಕ್ತಿಯನ್ನು ಸಂಗ್ರಹಿಸುತ್ತದೆ. ಲೋಲಕವು ಮಧ್ಯದಲ್ಲಿ ನಿಂತಾಗ ಎಲ್ಲಾ ಚಲನೆಯು ನಿಲ್ಲುತ್ತದೆ. ಮನಸ್ಸು ಕೂಡ ಲೋಲಕದಂತಿದೆ. ಪ್ರತಿದಿನ ಗಮನಿಸಿದರೆ ಅದರ ಬಗ್ಗೆ ನಮಗೇ ತಿಳಿಯುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮಧ್ಯದಲ್ಲಿಯೇ ಇರುವುದನ್ನು ಕಲಿಯೋಣ. ಡಿವಿಜಿ ಹೇಳಿದಂತೆ,
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |
ಹಿತವಿರಲಿ ವಚನದಲಿ, ಋತವ ಬಿಡದಿರಲಿ |
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ|
ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ||
(ನಾಳೆಯ ಅಂತರಂಗ: ಶ್ರೀ ಮರುಳಸಿದ್ಧ ಮಹಾಸ್ವಾಮೀಜಿ, ವಪ್ಪತ್ತೇಶ್ವರ ವಿರಕ್ತಮಠ, ಮಾಡಿಯಾಳ, ಕಲಬುರಗಿ)
ಅಕ್ಕನ ಅಂತರಂಗದ ಕಣ್ಣಿಗೆ ಬಸವಣ್ಣ ಕೇವಲ ಮಾನುಷರೂಪದಲ್ಲಿ ಕಾಣುತ್ತಿಲ್ಲ. ಬದಲಾಗಿ ಅಕ್ಕ ಅಣ್ಣನ ಶ್ರೀಪಾದದ ನೆಲೆಯನ್ನು ಒಳಗಣ್ಣಿನಿಂದಲೇ ಕಾಣುತ್ತಿದ್ದಾಳೆ. ಇದು ಅಕ್ಕನ ಅಧ್ಯಾತ್ಮದ ಚರಮನೆಲೆಯಲ್ಲದೆ ಇನ್ನೇನು?