KGF ಬ್ಯೂಟಿ ಶ್ರೀನಿಧಿ ಶೆಟ್ಟಿ SSLC ಮಾರ್ಕ್ಸ್ ಎಷ್ಟು ಗೊತ್ತಾ?ಕನ್ನಡ ಸಬ್ಜೆಕ್ಟ್​​ನಲ್ಲಿ ಪಡೆದ ಅಂಕ ನೋಡಿ ಭೇಷ್ ಎಂದ್ರು ಫ್ಯಾನ್ಸ್​​

srinidhi shetty kgf
Published on

 ಬೆಂಗಳೂರು: ಕನ್ನಡ ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಿಧಿ ಶೆಟ್ಟಿ.  ಈ ಸಿನಿಮಾ ನಂತರ ಸಾಲುಸಾಲು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ  ಸದ್ಯ ಶ್ರೀನಿಧಿ ಶೆಟ್ಟಿ ಅವರ ಬೇಡಿಕೆ ಬಹಳ ಹೆಚ್ಚಾಗಿದೆ.  ನಟಿ ಶ್ರೀನಿಧಿ ಶೆಟ್ಟಿ ಅವರ ಹತ್ತನೇ ತರಗತಿಯ ಅಕ್ಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಈಕೆ ಫ್ಯಾನ್ಸ್​​ ಕನ್ನಡದ ಮೇಲೆ ನಟಿಗೆ ಇರುವ ಅಭಿಮಾನ ಕಂಡು ಮೆಚ್ಚುಗೆ ಸುರಿಮಳೆ ಗೈದಿದ್ದಾರೆ.

ನಟಿ ಶ್ರೀನಿಧಿ ಶೆಟ್ಟಿ ಅವರು ಚಿತ್ರರಂಗಕ್ಕೆ ಕಾಲಿಡುವ ಮೊದಲು ಮೊಡೆಲಿಂಡ್ ಕ್ಷೇತ್ರದಲ್ಲಿ ಬಹಳ ಹೆಸರನ್ನ ಮಾಡಿ ನಂತರ ಕೆಜಿಎಫ್ ಚಿತ್ರದ ಮೂಲಕ ಬಹಳ ಅಭಿಮಾನಿಗಳನ್ನ ಗಳಿಸಿಕೊಂಡರು. ಕೆಜಿಎಫ್ 2 ಕೂಡ ಭರ್ಜರಿ ಯಶಸ್ಸನ್ನ ಮಾಡಿದ ಕಾರಣ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಕನ್ನಡ ಮಾತ್ರವಲ್ಲದೆ ಬೇರೆಬೇರೆ ಚಿತ್ರರಂಗದಲ್ಲಿ ಬಹಳ ಬೇಡಿಕೆ ಹೆಚ್ಚಾಗಿದೆ.

ನಟಿ ಶ್ರೀನಿಧಿ ಶೆಟ್ಟಿ ಅವರು ಮೂಲತಃ ಕನ್ನಡದ ಹುಡುಗಿ.  ಹತ್ತನೇ ತರಗತಿಯ ಕನ್ನಡ ಸಬ್ಜೆಕ್ಟ್ ನ ಅಂಕ ನೋಡಿದರೆ ಗೊತ್ತಾಗುತ್ತದೆ ಅವರಿಗೆ ಕನ್ನಡ ಎಷ್ಟು ಇಷ್ಟ ಅನ್ನುವುದು.  ಹತ್ತನೇ ತರಗತಿಯಲ್ಲಿ ಕನ್ನಡ ವಿಭಾಗದಲ್ಲಿ 125 ಅಂಕಕ್ಕೆ 121 ಅಂಕವನ್ನ ಪಡೆದುಕೊಂಡಿದ್ದಾರೆ.

ನಟಿ ಶ್ರೀನಿಧಿ ಶೆಟ್ಟಿ ಅವರು ಹತ್ತನೇ ತರಗತಿಯ ಕನ್ನಡ ವಿಭಾಗದ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ರೀನಿಧಿ ಶೆಟ್ಟಿ ಅವರ ನಟನೆ ಮತ್ತು ಅವರ ಕನ್ನಡ ಅಭಿಮಾನದ ಬಗ್ಗೆ  ಮೆಚ್ಚುಗೆ ಸೂಚಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net