"ಶಿವಲಿಂಗ', "ತೋತಾಪುರಿ' ಸೇರಿ ಕೆಲ ಚಿತ್ರಗಳು, "ಅಗ್ನಿಸಾ' ಸೇರಿ ಕೆಲ ಧಾರಾವಾಹಿಗಳ ಜತೆ "ಕಣ್ಣಲ್ಲೇ' ಎಂಬ ಆಲ್ಬಂ ಹಾಡಿನಲ್ಲಿ ನಟಿಸಿದ್ದ ಶ್ರೀಕಾಂತ್ ಗಣೇಶ್, ಕೆಲ ತಿಂಗಳ ಹಿಂದಷ್ಟೇ "ಮನದನಿ' ಎಂಬ ವಿಡಿಯೋ ಆಲ್ಬಂ ಸಾಂಗ್ನಲ್ಲಿ ಮಿಂಚಿದ್ದರು. ಆ ಹಾಡಿನ ಮೂಲಕ ಕನ್ನಡದಲ್ಲಿ ಮತ್ತೆ ಮುನ್ನಲೆಗೆ ಬರುವ ಭರವಸೆ ಅವರದಾಗಿತ್ತು. ವಿಶೇಷ ಅಂದರೆ ಡಬ್ ಸಿನಿಮಾಗಳು ಪರಭಾಷೆಗಳಲ್ಲಿ ಮಾರಾಟವಾಗುವಂತೆ, ಇದೀಗ ಈ ಕನ್ನಡ ಆಲ್ಬಂ ಸಾಂಗ್ನ ತೆಲುಗು ವರ್ಷನ್ ಕೂಡ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ. ಈ ಬಗ್ಗೆ ಸಂತಸ ಹಂಚಿಕೊಳ್ಳುವ ಅವರು, "ಕನ್ನಡದಲ್ಲೂ ಇಂಡೀ ಸಾಂಗ್ಸ್ ಟ್ರೆಂಡ್ ಶುರುವಾಗಿದೆ. ನಮ್ಮ "ಮನದನಿ' ಜತೆಗೆ "ಶುಭಾಶಯ', "ತುಳಸಿ', "ಗಿರ ಗಿರ ಗಿರ'ದಂತಹ ಹಾಡುಗಳು ಹಿಟ್ ಆಗಿವೆ. ತೆಲುಗು ವರ್ಷನ್ ಬಜೆಟ್ನ ಶೇಕಡಾ 40ರಷ್ಟು ಭಾಗಕ್ಕೆ ಮಾರಾಟವಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಸಿಕ್ಕ ರೆಸ್ಪಾನ್ಸ್ ನೋಡಿ ಇದೀಗ ಈ ಹಾಡನ್ನು ತಮಿಳು ಮತ್ತು ಮಲಯಾಳಂಗೂ ಡಬ್ ಮಾಡುವ ಪ್ಲಾ$್ಯನ್ ಇದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ. ಈ ಹಾಡಿನಿಂದ ಅವರಿಗೆ ಅವಕಾಶಗಳು ಹೆಚ್ಚಾಗಿದ್ದು, "ನಾನು ಈ ಸಾಂಗ್ ಮಾಡಿದ್ದೇ ಕನ್ನಡದಲ್ಲಿ ನಟಿಸಲು ಅವಕಾಶ ಸಿಗಲಿ ಎಂಬ ಕಾರಣಕ್ಕೆ. ಅದರಂತೆ ಕನ್ನಡದಲ್ಲಿ "ಅವಿ', "ಮಾರೀಚ' ಚಿತ್ರಗಳಲ್ಲಿ ನಟಿಸಿದ್ದೇನೆ. ಜತೆಗೆ ಈ ಹಾಡು ಬಿಡುಗಡೆಯಾದ ಬಳಿಕ ತೆಲುಗಿನಲ್ಲೂ ಆರ್ ಬಂತು. ಹೆಸರಾಂತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ "418' ಎಂಬ ಹಾರರ್ ಚಿತ್ರದಲ್ಲಿ ಕನ್ನಡತಿ ಚೈತ್ರಾ ಜೆ. ಆಚಾರ್ ಜತೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದೇನೆ. ಕನ್ನಡಿಗ ಕೀರ್ತನ್ ಗೌಡ ನಿರ್ದೇಶಿಸುತ್ತಿರುವ ಈ ಚಿತ್ರವನ್ನು "ಕೆಜಿಎ್' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಪ್ರಸ್ತುತಪಡಿಸುತ್ತಿದ್ದಾರೆ. ಇದೇ ವರ್ಷ ಈ ಮೂರು ಚಿತ್ರಗಳೂ ರಿಲೀಸ್ ಆಗಲಿವೆ. ಇನ್ನು "ಕಣ್ಮಣಿ' ಆಲ್ಬಂ ಸಾಂಗ್ ಬಿಡುಗಡೆ ಬಳಿಕ ತೆಲುಗಿನಲ್ಲಿ ಅವಕಾಶಗಳು ಹೆಚ್ಚುವ ಭರವಸೆಯಿದೆ' ಎಂದು ನಿರೀೆ ವ್ಯಕ್ತಪಡಿಸುತ್ತಾರೆ.