27ರಂದು ಶ್ರೀ ಶಾರದಮ್ಮ ದೇವಿ ಮಹಾ ರಥೋತ್ಸವ

srigeri sharade
-ಶೃಂಗೇರಿ ಶಾರದಾಂಬಾ
Published on

ಶೃಂಗೇರಿ: ಅಧಿದೇವತೆ ಶ್ರೀ ಶಾರದಮ್ಮ ದೇವಿ ಮಹಾ ರಥೋತ್ಸವ ೆ. 27ರಂದು ಜರುಗಲಿದೆ. ಮಹಾರಥೋತ್ಸವ ಪ್ರಯುಕ್ತ 23ರಂದು ಶ್ರೀ ಶಕ್ತಿಗಣಪತಿ ಸನ್ನಿಧಿಯಲ್ಲಿ ಪೂಜೆ, ಪ್ರಾರ್ಥನೆ ನೆರವೇರಲಿದೆ.
24ರಂದು ಧ್ವಜಾರೋಹಣ, ಮಂತ್ರಜಪ ಮತ್ತು ವೇದಪಾರಾಯಣಗಳ ಪ್ರಾರಂಭ, ಸಹಸ್ರಮೋದಕ ಗಣಪತಿ ಹೋಮ, ಯಾಗಶಾಲಾಪ್ರವೇಶ, ಜಗದ್ಗುರುಗಳಿಂದ ಶತಚಂಡಿಮಹಾಯಾಗದ ಸಂಕಲ್ಪ, ಋತ್ವಿಜರಿಂದ ಚಂಡಿಪಾರಾಯಣ ನಡೆಯಲಿದೆ. 25ರಂದು ಚಂಡಿಪಾರಾಯಣ, ಕ್ಷೇತ್ರಪಾಲಕ ಬ್ರಹ್ಮ ಸನ್ನಿಧಿಯಲ್ಲಿ ವಿಶೇಷಪೂಜೆ ಮತ್ತು ಮಂಗಳಾರತಿ, ಸಂಜೆ ಶ್ರೀ ಶಾರದಮ್ಮ ಅವರ ಬೀದಿ ಉತ್ಸವ ನಡೆಯಲಿದೆ.
26ರಂದು ಚಂಡಿಪಾರಾಯಣ, ಮಧ್ಯಾಹ್ನ 12ಕ್ಕೆ ಯತಿವರ್ಯರಿಂದ ಶ್ರೀ ಶಾರದೆಗೆ ವಿಶೇಷಪೂಜೆ, ಮಹಾಮಂಗಳಾರತಿ, ಒಂಬತ್ತು ಜನ ಸುವಾಸಿನಿಯರಿಗೆ ಪೂಜೆ ಮತ್ತು ಸಂತರ್ಪಣೆ, ಸಂಜೆ ಶಾರದಮ್ಮನವರ ಬೀದಿ ಉತ್ಸವ ನಡೆಯಲಿದೆ.
27ರಂದು ಚಂಡಿಪಾರಾಯಣ, ಬೆಳಗ್ಗೆ 10ಕ್ಕೆ ಶಾರದಮ್ಮ ಸನ್ನಿಧಿಯಲ್ಲಿ ಮಹಾನೀರಾಜನ, ರಥಾರೋಹಣ ಪ್ರಾರ್ಥನೆ, ಮಧ್ಯಾಹ್ನ 11ರಿಂದ ಜಗದ್ಗುರುಗಳ ಉಪಸ್ಥಿತಿಯಲ್ಲಿ ವೇದ ಮತ್ತು ಮಂಗಳವಾದ್ಯಗಳೊಂದಿಗೆ ಶ್ರೀ ಶಾರಾದಾಂಬಾ ಮಹಾರಥೋತ್ಸವ ಜರುಗಲಿದೆ. 28ರಂದು ಶ್ರೀ ಜಗದ್ಗುರು ವರ್ಯರ ಸಾನ್ನಿಧ್ಯದಲ್ಲಿ ಶತಚಂಡಿಮಹಾಯಾಗದ ಪೂರ್ಣಾಹುತಿ, ಓಕುಳಿ ಉತ್ಸವ, ಸಂಜೆ ತೆಪೋತ್ಸವ ಬಳಿಕ ಬೀದಿ ಉತ್ಸವ, ಧ್ವಜಾವರೋಹಣ ಮತ್ತು 29ರಂದು ಮಹಾಸಂಪ್ರೋಕ್ಷಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net